ಕಳೆದ ಮಳೆಗಾಲದಲ್ಲಿ ನೆಲಸಮಗೊಂಡಿದ್ದ ಮರ್ಕಂಜ ಗ್ರಾಮದ ಹೈದಂಗೂರು ಬಸ್ಸು ತಂಗುದಾಣವನ್ನು ಪುನರ್ ನಿರ್ಮಿಸಿ ಇದರ, ಉದ್ಘಾಟನಾ ಕಾರ್ಯಕ್ರಮ ವು ಸೆ.29ರಂದು ನಡೆಯಿತು.
ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ಗೀತಾ ಹೊಸೊಳಿಕೆ ನೂತನ ಬಸ್ಸು ತಂಗುದಾಣವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ಸಂಧ್ಯಾ ಸೇವಾಜೆ, ಸದಸ್ಯರುಗಳಾದ ಗೋವಿಂದ ಅಳವುಪಾರೆ, ಪವಿತ್ರ ಗುಂಡಿ, ಚಿತ್ತರಂಜನ್ ಕೋಡಿ, ಯಶವಂತ ಸೂಟೆಗದ್ದೆ, ಶಾಸ್ತಾವು ಯುವಕ ಮಂಡಲದ ಅಧ್ಯಕ್ಷ ಶಶಿಕಾಂತ ಗುಳಿಗಮೂಲೆ, ಮರ್ಕಂಜ ಸೊಸೈಟಿ ನಿರ್ದೇಶಕ ಮೋನಪ್ಪ ಪೂಜಾರಿ ಹೈದಂಗೂರು, ಸ್ಥಳೀಯರಾದ ರಮೇಶ್ ನಾಯ್ಕ ಹೈದಂಗೂರು, ಭೈರಪ್ಪ ಹೈದಂಗೂರು, ಜನಾರ್ಧನ ಹೈದಂಗೂರು, ಷಣ್ಮುಖ ಸೂಟೆಗದ್ದೆ ಮತ್ತಿತರರಿದ್ದರು.