ಪಂಜದಲ್ಲಿ ಬೃಹತ್ ರಕ್ತದಾನ ಶಿಬಿರ-ಉದ್ಘಾಟನೆ

0


ರಕ್ತದಾನ ಸಮಾಜ ಸೇವೆ : ಪಿ.ಬಿ.ಸುಧಾಕರ ರೈ

ರಾಜ್ಯ ಪ್ರಶಸ್ತಿ ಪುರಸ್ಕೃತ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್,ಯುವಜನ ಸಂಯುಕ್ತ ಮಂಡಳಿ ಸುಳ್ಯ ಇದರ ಆಶ್ರಯದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ತಾಲೂಕು. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮಂಗಳೂರು, ಪ್ರಾಥಮಿಕ ಅರೋಗ್ಯ ಕೇಂದ್ರ ಪಂಜ, ಗ್ರಾಮ ಪಂಚಾಯತ್ ಪಂಜ ಇದರ ಸಹಯೋಗದೊಂದಿಗೆ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ ಅ.1ರಂದು ಪಂಜ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಸುಳ್ಯ ತಾಲೂಕು ಭಾರತೀಯ ರೆಡ್ ಕ್ರಾಸ್ ಸೊಸೈಟಿ ಸಭಾಪತಿ ಪಿ. ಬಿ ಸುಧಾಕರ ರೈ ಉದ್ಘಾಟಿಸಿ
ಮಾತನಾಡಿ ‘ರಾಜ್ಯ ಪ್ರಶಸ್ತಿ ಪುರಸ್ಕೃತ ಪಂಚಶ್ರೀ ಪಂಜ ಸ್ಪೋರ್ಟ್ಸ್ ನಿರಂತರ ಸಮಾಜ ಸೇವೆ ನೀಡುತಾ ಮಾದರಿ ‌ಸಂಘಟನೆಯಾಗಿ ಬೆಳೆದಿದೆ. ರಕ್ತದಾನ ಕೂಡ ವಿಶೇಷ ಸಮಾಜ ಸೇವೆ” ಎಂದು ಹೇಳಿದರು.
ಇದೇ ವೇಳೆ ಅವರು ಶಿಬಿರಕ್ಕೆ ದೇಣಿಗೆ ಚೆಕ್ ಹಸ್ತಾಂತರಿಸಿರು.


ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಪವನ್ ಪಲ್ಲತ್ತಡ್ಕ ಅಧ್ಯಕ್ಷತೆ ವಹಿಸಿದ್ದರು.ಅತಿಥಿಗಳಾಗಿ ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಜಳಕದಹೊಳೆ, ಯುವ ಜನ ಸಂಯುಕ್ತ ಮಂಡಳಿ ಪೂರ್ವಾಧ್ಯಕ್ಷ , ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು,
ಸುಳ್ಯ ತಾಲೂಕು ಭಾರತೀಯ ರೆಡ್ ಕ್ರಾಸ್ ಸೊಸೈಟಿ ಖಜಾಂಜಿ ವಿನಯ ಕುಮಾರ್ ಹಾಗೂ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ ಶರತ್ ಕುದ್ವ,ಶಿಬಿರದ ಸಂಯೋಜಕರಾದ ಜನಾರ್ಧನ ನಾಗತೀರ್ಥ, ಸುಜೀತ್ ಪಂಬೆತ್ತಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಹಕರಿಸಿದ ಸಂಘ-ಸಂಸ್ಥೆಗಳು :
ಬಿ.ಎಂಎಸ್ ಆಟೋ ಚಾಲಕ ಮಾಲಕ ಸಂಘ ಪಂಜ, ಜೇಸಿಐ ಪಂಜ ಪಂಚಶ್ರೀ, ಯುವ ತೇಜಸ್ಸು ಟ್ರಸ್ಟ್ ,ವಿಕ್ರಮ ಯುವಕ ಮಂಡಲ ಬಳ್ಪ, ಮಿತ್ರ ಮಂಡಲ ನಾಗತೀರ್ಥ, ಉಳ್ಳಾಕುಲು ಕಲಾರಂಗ ಪಲ್ಲೋಡಿ,
ಲಯನ್ಸ್ ಕ್ಲಬ್ ಪಂಜ, ಸದಾಸಿದ್ಧಿ ಮಿತ್ರ ಬಳಗ ಬೀದಿಗುಡ್ಡೆ, ಯುವಶಕ್ತಿ ಗೆಳೆಯರ ಬಳಗ ಪೊಳೆಂಜ,
ಜೈ ಕರ್ನಾಟಕ ಯುವಕ ಮಂಡಲ,
ಐವತ್ತೊಕ್ಲು, ಶಿವಾಜಿ ಯುವಕ ಮಂಡಲ ಕೂತ್ಕುಂಜ, ಗರಡಿ ಕ್ರಿಕೆಟರ್ಸ್ ನಾಗತೀರ್ಥ,ವನಿತಾ ಸಮಾಜ ಪಂಜ, ಪಂಚಶ್ರೀ ಯುವಕ ಮಂಡಲ ಪಂಬೆತ್ತಾಡಿ,
ಸಿದ್ದಿವಿನಾಯಕ ಸ್ಪೋರ್ಟ್ಸ್ ಕ್ಲಬ್ ಬೀದಿಗುಡ್ಡೆ, ಶಿವ ಫ್ರೆಂಡ್ಸ್ ಪಂಜ, ದುರ್ಗಾ ಸೇವಾ ಸಂಘ ಕೇನ್ಯ ಕಾರ್ಯಕ್ರಮಕ್ಕೆ ಸಹಕರಿಸಿದವು.

ಕಾರ್ಯಕ್ರಮದಲ್ಲಿ ಶರತ್ ಕುದ್ವ ರವರು ಸಭೆಗೆ ‘ಸ್ವಚ್ಛತಾ ಪ್ರತಿಜ್ಞಾ’ ವಿಧಿ ಬೋಧಿಸಿದರು.ತಾರಾನಾಥ ನಾಗತೀರ್ಥ ಪ್ರಾರ್ಥಿಸಿದರು.
ಜನಾರ್ಧನ ನಾಗತೀರ್ಥ ಸ್ವಾಗತಿಸಿದರು. ದುರ್ಗಾಪ್ರಸಾದ್ ಅಂಬೆಕಲ್ಲು ವೇದಿಕೆಗೆ ಆಹ್ವಾನಿಸಿದರು. ದಾಮೋದರ ನೇರಳ ನಿರೂಪಿಸಿದರು.
ಶರತ್ ಕುದ್ವ ವಂದಿಸಿದರು.