ರಸ್ತೆ ಬದಿ ಬಿದ್ದಿರುವ ಮರದ ಕೊಂಬೆಗಳು ಹಾಗೂ ಮರದಿಂದ ಸಂಚಾರಕ್ಕೆ ತೊಂದರೆ
ಸೋಣಂಗೇರಿ ಬೇಂಗಮಲೆ ಮುಖ್ಯರಸ್ತೆಯು ಅಲ್ಲಲ್ಲಿ ಹೊಂಡ ಗುಂಡಿಗಳಿಂದ ಕೂಡಿದ್ದು ವಾಹನ ಸವಾರರಿಗೆ ತೊಂದರೆಯಾಗಿದೆ.
ರಸ್ತೆ ಅಗಲೀಕರಣ ಕಾಮಗಾರಿಯು ಪ್ರಾರಂಭವಾಗಿದ್ದು ಈಗ ಕೆಲಸ ಸ್ಥಗಿತಗೊಂಡಿದೆ.
ರಸ್ತೆಯ ಮಧ್ಯಭಾಗದಲ್ಲಿ ಕೆಲವು ಕಡೆ ದೊಡ್ಡ ದೊಡ್ಡ ಗುಂಡಿಗಳಿದ್ದು ಇದರಿಂದ ದ್ವಿಚಕ್ರ ವಾಹನ ಸವಾರರಿಗೆ ಸಮಸ್ಯೆಯಾಗಿದೆ.
ವಾಹನ ಸವಾರರು ಗುಂಡಿಗಳನ್ನು ತಪ್ಪಿಸುತ್ತಾ ಹೋಗುವಾಗ ಎದುರಿನಿಂದ ಬರುವ ವಾಹನಗಳನ್ನು ಗಮನಿಸದೆ ಅಪಘಾತವಾಗುವ ಸಂಭವವೂ ಹೆಚ್ಚು.
ಮಳೆ ಬರುವ ಸಂದರ್ಭದಲ್ಲಿ ರಸ್ತೆಯಲ್ಲಿರುವ ಗುಂಡಿಗಳಲ್ಲಿ ಮಳೆ ನೀರು ತುಂಬಿರುವಾಗ ದ್ವಿಚಕ್ರ ವಾಹನ ಸವಾರರಿಗೆ ಗುಂಡಿಯ ಅರಿವು ಆಗದೆ ಬೈಕ್ ಗುಂಡಿಗೆ ಬಿದ್ದು ಪಲ್ಡಿಯಾಗಿ ಸವಾರರು ಗಾಯಗೊಡಿರುವ ಘಟನೆಯೂ ಇತ್ತೀಚೆಗೆ ನಡೆದಿದೆ.
ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಗುಂಡಿ ಮುಚ್ಚುವ ಕಾರ್ಯ ನಡೆಸಬೇಕಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಬಿದ್ದ ಮರದ ಕೊಂಬೆಗಳು,ಮರ ರಸ್ತೆಯ ಬದಿಯಲ್ಲಿದೆ
ಇತ್ತೀಚೆಗೆ ಸುರಿದ ಭಾರೀ ಗಾಳಿ ಮಳೆಗೆ ಬೇಂಗಮಲೆ ರಸ್ತೆಯ ಇಳಿಜಾರಿನಲ್ಲಿ ರಾತ್ರಿ ಮರಗಳು ರಸ್ತೆಗೆ ಉರುಳಿ ಬಿದ್ದಿತ್ತು.ಇದನ್ನು ಐವರ್ನಾಡಿನ ಗೆಳೆಯರ ಬಳಗದ ಪದಾಧಿಕಾರಿಗಳು ಅಂದೇ ರಾತ್ರಿ ಮರ ಕೊಯ್ದು ರಸ್ತೆಯಿಂದ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು.
ಆದರೆ ಅದರ ಮರದ ರೆಂಬೆಗಳು ಮತ್ತು ಮರದ ತುದಿಯ ಒಂದು ಭಾಗ ರಸ್ತೆಯ ಬದಿಯಲ್ಲಿ ಇರುವುದರಿಂದ ಇದನ್ನು ಸಂಪೂರ್ಣ ತೆರವುಗೊಳಿಸಬೇಕಾಗಿದೆ.
ಎರಡು ಕಡೆಯಿಂದ ವಾಹನಗಳು ಬರುವಾಗ ಸೈಡ್ ಕೊಡುವ ಸಂದರ್ಭದಲ್ಲಿ ರಸ್ತೆಯಲ್ಲಿರುವ ಮರದ ಕೊಂಬೆಗಳಿಂದ ಜಾಗ ಸಾಕಾಗುವುದಿಲ್ಲ.ಇದು ಅಪಘಾತಕ್ಕೆ ಕಾರಣವಾಗಬಹುದು ಆದುದರಿಂದ ಅಪಘಾತಗಳು ಸಂಭವಿಸುವ ಮೊದಲು ಇದಕ್ಕೆ ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಸ್ಪಂದಿಸಿಬೇಕೆಂದು ಸಾರ್ವಜನಿಕರು ವಿನಂತಿಸಿದ್ದಾರೆ.