ಜಿಲ್ಲಾ ದಸರಾ ಕ್ರೀಡಾಕೂಟದಲ್ಲಿ ಇಂಚರಾ ಳಿಗೆ ಎತ್ತರ ಜಿಗಿತದಲ್ಲಿ ಚಿನ್ನದ ಪದಕ ಮತ್ತು ನಿಹಾರ ಕೆ ಬಿ ಗೆ 110 ಮೀಟರ್ ಹರ್ಡಲ್ಸ್ ನಲ್ಲಿ ಬೆಳ್ಳಿ ಪದಕ

0


ಅ. 01 ರಂದು , ಮಂಗಳಾ ಕ್ರೀಡಾಂಗಣ ಮಂಗಳೂರು ಇಲ್ಲಿ ನಡೆದ ಜಿಲ್ಲಾ ದಸರಾ ಕ್ರೀಡಾಕೂಟದಲ್ಲಿ ಸುಳ್ಯ ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕು .ಇಂಚರಾ ಎತ್ತರ ಜಿಗಿತ ದಲ್ಲಿ ಚಿನ್ನದ ಪದಕ ಪಡೆದು, ವಲಯ ಮಟ್ಟಕ್ಕೆ ಆಯ್ಕೆಗೊಂಡು, ಅಕ್ಟೋಬರ 02 ರಂದು ನಡೆದ, ಮೈಸೂರು ವಲಯ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಕಂಚಿನ ಪದಕ ಪಡೆದಿರುತ್ತಾರೆ .

ಸಂಸ್ಥೆಯ ಇನ್ನೊರ್ವ ವಿದ್ಯಾರ್ಥಿ ನಿಹಾರ್ ಕೆ ಬಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ 110 ಮೀಟರ್ ಹರ್ಡಲ್ಸ್ ನಲ್ಲಿ ಬೆಳ್ಳಿ ಪದಕ ಪಡೆದಿರುತ್ತಾರೆ.