ಸಮಹಾದಿ : ಅಬ್ದುಲ್ ರಹಿಮಾನ್ ಮೊಗರ್ಪಣೆಯವರಿಗೆ ಸನ್ಮಾನ

0

ರಿಫಾಯಿ ಜುಮ್ಮಾ ಮಸ್ಜಿದ್ ಸಮಹಾದಿ ಆಡಳಿತ ಸಮಿತಿ ವತಿಯಿಂದ ಮೀಲಾದ್ ಪ್ರಯುಕ್ತ ನಡೆದ ಕಥಾಪ್ರಸಂಗ ವೇದಿಕೆಯಲ್ಲಿ ವಕ್ಫ್ ದ.ಕ ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ರಹಮಾನ್ ಮೊಗರ್ಪಣೆ ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಬೈತಡ್ಕ ದರ್ಗಾ ಶರೀಫ್ ಮತ್ತು ಜುಮ್ಮಾ ಮಸ್ಜಿದ್ ನ ಅಧ್ಯಕ್ಷ ಅಬ್ದುಲ್ ಹಮೀದ್ ಹಾಜಿ ಬೈತಡ್ಕ, ಕಥಾಪ್ರಸಂಗದ ಝುಬೈರ್ ಮಾಸ್ಟರ್ ತೊಟ್ಟಿಕ್ಕಲ್,ಬೈತಡ್ಕ ಮುದರ್ರಿಸ್ ಜುನೈದ್ ಸಖಾಫಿ ಬೆಳ್ಮ,ಬೈತಡ್ಕ ದರ್ಗಾ ಶರೀಫ್ ಮತ್ತು ಜುಮ್ಮಾ ಮಸ್ಜಿದ್ ನ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಅಲೆಕ್ಕಾಡಿ, ಸಮಹಾದಿ ಮಸ್ಜಿದ್ ಅಧ್ಯಕ್ಷ ಸಾದಿಕ್ ಸಮಹಾದಿ,ಮಸ್ಜಿದ್ ಖತೀಬರಾದ ರಫೀಕ್ ನಿಝಾಮಿ, ಉದ್ಯಮಿಗಳಾದ ಮಮ್ಮಾಲಿ ಹಾಜಿ ಬೆಳ್ಳಾರೆ, ಮೆಹ್ಮೂದ್ ಬೆಳ್ಳಾರೆ, ಆರಿಫ್ ಇಂಜಿನಿಯರ್ ಬೆಳ್ಳಾರೆ, ಸಮಹಾದಿ ಮಸ್ಜಿದ್ ಸಮಿತಿ ಪದಾಧಿಕಾರಿಗಳಾದ ಪಿ.ಎಂ ಅಬ್ದುಲ್ ರಹಿಮಾನ್, ಉಮ್ಮರ್ ಫಾರೂಕ್ ರಾಗಿಪೇಟೆ, ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.