ಡಾ.ಚಂದ್ರಶೇಖರ ಕಿರಿಭಾಗರಿಗೆ ‘ಗಾಂಧಿ ಸ್ಮೃತಿ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮ

0

ಗಾಂಧಿಯವರ ಸತ್ಯ, ಅಹಿಂಸೆಯ ಆದರ್ಶ ವಿಶ್ವಸಂಸ್ಥೆಯಲ್ಲಿ ಹಾಗೂ ಭಾರತದ ನ್ಯಾಯಾಲಯಗಳಲ್ಲಿ ಸ್ಥಾನ ದೊರಕಿಸಿತು : ಪ್ರಭಾಕರ ಕಿರಿಭಾಗ

ನಿಮ್ಮ ಅಭಿಮಾನಕ್ಕೆ ನಾನು ಧನ್ಯನಾದೆ : ಡಾ. ಚಂದ್ರಶೇಖರ ಕಿರಿಭಾಗ

ಗಾಂಧಿ ಜಯಂತಿ ಪ್ರಯುಕ್ತ ಸುಳ್ಯದ ಯುವಜನ ಸಂಯುಕ್ತ ಮಂಡಳಿ ಹಾಗೂ ಸುಳ್ಯದ ಯುವಜನ ಸೇವಾ ಸಂಸ್ಥೆ ಕೊಡ ಮಾಡುವ ಗಾಂಧಿ ಸ್ಮೃತಿ ಪ್ರಶಸ್ತಿ ಗೆ ಖ್ಯಾತ ವೈದ್ಯ, ಹರಿಹರಪಲ್ಲತಡ್ಕದ ಡಾ.ಚಂದ್ರಶೇಖರ ಕಿರಿಭಾಗರು ಭಾಜನರಾಗಿದ್ದು ಅ.7ರಂದು ಹರಿಹರಪಲ್ಲತಡ್ಕದ ಹರಿಹರೇಶ್ವರ ದೇವಸ್ಥಾನದ ಶ್ರೀ ಹರಿಹರೇಶ್ವರ ಕಲಾ ಮಂದಿರದಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು. ಸಭಾಂಗಣ ಪೂರ್ತಿ ಅಭಿಮಾನಿಗಳಿಂದ ತುಂಬಿ ತುಳಕಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿತು.

ಪ್ರಶಸ್ತಿ ಪ್ರದಾನ ಸಮಾರಂಭವನ್ನು ಶಾಸಕಿ‌ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು. ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಡಾ.ಚಂದ್ರಶೇಖರ ಕಿರಿಭಾಗ ಮತ್ತು ಶ್ರೀಮತಿ ಹರ್ಷಮ್ಮ ಚಂದ್ರಶೇಖರ ಅವರನ್ನು ಹೂವು, ಹಾರ, ಸ್ಮರಣಿಕೆ, ಶಾಲು ಹೊದಿಸಿ ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡಿದರು. ಪಂಜ ಪದವಿ ಪೂರ್ವ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರಭಾಕರ ಕಿರಿಭಾಗ ಗಾಂಧಿ ಪ್ರತಿಪಾದನೆಯ ಮೌಲ್ಯಗಳ ವಿಚಾರದಲ್ಲಿ ಮಾತನಾಡಿ ಅಭಿನಂಧನಾ ಮಾತುಗಳನ್ನಾಡುತ್ತಾ
ವಿಶ್ವಸಂಸ್ಥೆಯಲ್ಲಿ ಹಾಗೂ ಭಾರತದ ನ್ಯಾಯಾಲಯಗಳಲ್ಲಿ ಮಹಾತ್ಮ ಗಾಂಧಿಯವರ ಪೋಟೋ ಇದೆ ಅಂದರೆ ಅವರು ನಡೆದು ಕೊಂಡ ಆದರ್ಶ ಎಂತದ್ದು ನಾವರಿಯಬೇಕು. ಸತ್ಯದ ಮಹತ್ವ ಏನು ಎಂಬುವುದನ್ನು ತೋರಿಸಿ ಕೊಟ್ಟವರು. ಗಾಂಧಿ ಹತ್ಯೆ ಸಂದರ್ಭ ವಿಶ್ವಸಂಸ್ಥೆಯಲ್ಲಿ ಧ್ವಜವನ್ನು ಕೆಳಗಿಸಿದ್ದಾರೆ ಅಂದರೆ ಅವರ ಆದರ್ಶ ಪ್ರಪಂಚವನ್ನು ಎಷ್ಟು ಆಕರ್ಷಿಶಿಸಿದೆ ಎಂದು ಗೊತ್ತಾಗುತ್ತದೆ. ದೇಶದ ಪ್ರಧಾನಿ ನಿಧನರಾದಾಗ ಧ್ವಜ ಇಳಿಸುವ ಕ್ರಮವಿದೆ. ಆದರೆ ಗಾಂದಿಯವರ ನಿಧನಕ್ಕೆ ಈ ಪರಿಯ ಗೌರವ ಇದೆ ಅಂದರೆ ಅವರ ಮಹತ್ವ ಏನು ಎಂಬುದು ಅರ್ಥವಾಗಬೇಕು. ದೇವರನ್ನು ಕಾಣಬೇಕಾದರೆ ಸತ್ಯದ ದಾರಿಯಲ್ಲಿ ಇರಬೇಕು ಎಂದು ತೋರಿಸಿಕೊಟ್ಟರು. ನುಡಿದಂತೆ ನಡೆದರೆ ಸತ್ಯ ಇಲ್ಲದೆ ಬೇರೆನೂ ಮಾಡಲು ಸಾದ್ಯವಿಲ್ಲ. ಉಸಿರಾಡಲು ಎರಡು ಪುಪ್ಪಸ ಇದ್ದಂತೆ ಸತ್ಯ ಮತ್ತು ಅಹಿಂಸೆ ಎರಡೂ ಒಂದಕ್ಕೊಂದು ಪೂರಕ ಅದು ಗಾಂಧಿ ತತ್ವ ಎಂದರು. ಇತಿಹಾಸದಲ್ಲಿ ಹಲವಾರು ಕ್ರಾಂತಿ ಆಗಿದೆ.‌ ಆದರೆ ಅಹಿಂಸೆಯ ಸಾಧನೆಯೇ ಮೇಲು. ಅಹಿಂಸೆಯೇ ಎಲ್ಲಾ ದರ್ಮಗಳ ಮೂಲ .‌ಅಹಿಂಸೆ ಅಂದರೆ ಹೇಡಿತನದಿಂದ ಓಡಿಬರುವುದಿಲ್ಲ. ಸತ್ಯದ ವಿರುದ್ದದ ಘಟನೆಯನ್ನು ಪ್ರತಿಭಟಿಸುವುದು ಕೂಡ ಅಹಿಂಸೆಯೇ. ಅಸತ್ಯ ಯಾವತ್ತೂ ಶಾಶ್ವತವಲ್ಲ ಎಂದವರು ಹೇಳಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಚರಕಕ್ಕೆ ಹೆಚ್ಚು ಪ್ರಾಧ್ಯಾನತೆ ಕೊಟ್ಟರು ಗಾಂಧಿಜೀಯವರು. ಚರಕ ಎಂಬುದು ಹಿಂದು ಧರ್ಮದ ಸಂಕೇತವಾಗಿತ್ತು. ಖಾದಿ ಸ್ವಾತಂತ್ರ್ಯ ಹೋರಾಟದ ಸಂಕೇತ. ಖಾದಿ ಬಟ್ಟೆ ತೊಡಲು ಕರೆ ಕೊಟ್ಟು ಬ್ರಿಟಿಷ್‌ ಆಡಳಿತದ ಬಟ್ಟೆಯ ಬಳಕೆ ಕಡಿಮೆ ಗೊಳಿಸಿ ಸ್ವಾವಲಂಬಿತ‌ ಗ್ರಾಮಗಳ ಅಭ್ಯುದಯ ಮಾಡಿರುವುದು ಗಂಧಿಯ ತತ್ವ ಸಿದ್ದಾಂತದ ಮಹತ್ವ ಸಾರುವ ವಿಷಯಗಳು ಎಂದು ನುಡಿದರು.

ಭಾಗೀರಥಿ ಮುರುಳ್ಯ ಮಾತನಾಡಿ
ಗ್ರಾಮ ಅಭಿವೃದ್ಧಿಯಿಂದ ದೇಶ ಅಭಿವೃದ್ಧಿ. ನಾನು ಈ ಮಟ್ಟಕ್ಕೆ ಬೆಳೆಯಲು ಯುವಜನ ಸಂಯುಕ್ತ ಮಂಡಳಿ ಕಾರಣ. ನನ್ನನ್ನು ಆರಿಸಿ ಕಳುಹಿಸಿದ ನೀವು ಮುಂದೆಯೂ ಮಾರ್ಗದರ್ಶನ ಮಾಡಬೇಕು. ಸುಳ್ಯ ವಿಧಾನಸಭಾ ಮಾದರಿ ಕ್ಷೇತ್ರವಾಗಿ ಮಾಡಲು ನೀವೆಲ್ಲಾ ಕೈ ಜೋಡಿಸಬೇಕು ಎಂದರು.

ಹರಿಹರೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಕೂಜುಗೋಡು, ಹರಿಹರ ಪಲ್ಲತಡ್ಕ ಗ್ರಾ.ಪಂ ಅಧ್ಯಕ್ಷ ವಿಜಯಕುಮಾರ್ ಅಂಙಣ,
ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ
ಪ್ರವೀಣ್ ಕುಮಾರ್ ಎ.ಎಂ, ಸಚಿನ್ ಕ್ರೀಡಾ ಸಂಘ ಹರಿಹರ ಪಲ್ಲತಡ್ಕದ ಅಧ್ಯಕ್ಷ ಪ್ರದೀಪ್ ಕಜ್ಜೋಡಿ, ಯುವಜನ ಸೇವಾ ಸಂಘದ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ಯುವಜನ ಸೇವಾ ಸಂಸ್ಥೆಯ ಶೈಲೇಶ್ ಅಂಬೆಕಲ್ಲು, ಯುವಜನ ಸಂಯುಕ್ತ ಮಂಡಳಿ ಪೂರ್ವಾಧ್ಯಕ್ಷರುಗಳಾದ ದಿನೇಶ್ ಮಡಪ್ಪಾಡಿ, ಕಾರ್ಯಕ್ರಮ ಉಸ್ತುವಾರಿ ದಿನೇಶ್ ಹಾಲೆಮಜಲು ಉಪಸ್ಥಿತರಿದ್ದರು.

ಆರಂಭದಲ್ಲಿ ಮೀರಾ ಭಜನ್ ಕಾರ್ಯಕ್ರಮ ಜರಗಿತು.
ರಾಜೇಶ್ವರಿ, ಈಶ್ವರಿ, ಅಂಬಿಕ ಪ್ರಾರ್ಥಿಸಿದರು. ದೀಪಕ್ ಕುತ್ತುಮೊಟ್ಟೆ ಪ್ರಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಪ್ರಣೀಣ್ ಕುಮಾರ್ ವಂದಿಸಿದರು.
ಯುವಜನ ಸಂಯುಕ್ತ ಮಂಡಳಿ ಉಪಾಧ್ಯಕ್ಷ , ನಿರ್ದೇಶಕರುಗಳಾದ ಗುರುರಾಜ್ ಅಜ್ಜಾವರ ಕಾರ್ಯಕ್ರಮ ನಿರೂಪಿಸಿದರು.

ನನಗೆ ಇಷ್ಟು ಅಭಿಮಾನಿಗಳು ಇದ್ದಾರೆ ಅಂದರೆ ನನಗೆ ಆಶ್ಚರ್ಯವಾಗಿದೆ. ಹರಿಹರ ಪಲ್ಲತಡ್ಕದಲ್ಲಿ ಸಾಂಸ್ಕೃತಿಕ ಹಾಗೂ ಮದುವೆ ಕಾರ್ಯಕ್ರಮದಲ್ಲಿ ಜನ ಸೇರುವುದನ್ನು ನೋಡಿದ್ದೇನೆ. ಇವತ್ತು ನನ್ನ ಕಾರ್ಯಕ್ರಮಕ್ಕೆ ಇಷ್ಟು ಅಭಿಮಾನವಿಟ್ಟು ಬಂದಿರುವ ನಿಮಗೆ ಕೃತಜ್ಞತೆಗಳು. ಹರಿಹರದಲ್ಲಿ ಹಿಂದೆ ಒಂದೇ ಜೀಪು ಇದ್ದದ್ದು ಆ ಸಂದರ್ಭ ಕ್ಲಿಷ್ಟ ಸಂದರ್ಭದಲ್ಲೂ ಚಿಕಿತ್ಸೆ ಕೊಡುವ ಅನಿವಾರ್ಯವಿತ್ತು ಹಾಗಾಗಿ ಗರ್ಭಿಣಿಯರಿಗೂ ಚಿಕಿತ್ಸೆ ನೀಡಲಾಗುತ್ತಿತ್ತು.

ಡಾ‌. ಚಂದ್ರಶೇಖರ ಕಿರಿಭಾಗ

ಮಾನವೀಯಯತೆ, ಮಾನವ ಧರ್ಮ ಪಾಲಿಸಿದ ಊರಿನ ಜನತೆ ಕೊಡುಗೆ ಕೊಟ್ಟಿದ್ದಾರೆ. ನಾನು ಎಂಬ ಅಹಂಕಾರದಿಂದ ದೂರ ದೂರ ಹೋಗುತಿದ್ದ ಕಾಲ ಸಾಮರಸ್ಯದ ಬದುಕು ಕಳೆದುಹೋಗುತಿರುವ ಕಾಲದಲ್ಲಿ ಈ ಸನ್ಮಾನ ಅಗತ್ಯದ್ದು.ಈಗಿನ ಸಮಾಜದಲ್ಲಿ ನಮ್ಮ ಮಕ್ಕಳಿಗೆ ಕೃಷಿ ಬಗ್ಗೆ ಹೇಳಿಕೊಡುತಿಲ್ಲ. ಕೃಷಿ ಲಾಭಾದಾಯಕ ಎನ್ನುವುದನ್ನು ಮನವರಿಕೆ ಮಾಡಿ‌ ಕೊಡುವ ಕಾಲ ಬಂದಿದೆ.
: ಭೋಜೆ ಗೌಡ

ನಮ್ಮ ಚಿಂತನೆಗೆ ಗೌರವ ಕೊಟ್ಟು ಹರಿಹರಪಲ್ಲತಡ್ಕದಲ್ಲಿ ಇಷ್ಟು ಜನ ಸೇರಿದ್ದೀರಿ ನಿಮಗೆ ವಂದನೆಗಳು. : ದಿನೇಶ್ ಮಡಪ್ಪಾಡಿ.
…..
ಡಾ. ಚಂದ್ರಶೇಖರ ಅವರು ಈ ಭಾಗದ ನಾಡಿ ಮಿಡಿತ ಅರಿತವರು. ಅವರು ನಡತೆಗೆ ನಮಗೆ ಮಾದರಿ. ಅವರು ಇನ್ನೂ ಸದೃಡವಾಗಿದ್ದಾರೆ ಅವರ ನಡೆ, ನುಡಿ ಕಾರಣ.:

ಕಿಶೋರ್ ಕುಮಾರ್ ಕೂಜುಗೋಡು