ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಗಿರೀಶ್ ವರ್ಗಾವಣೆ

0

ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿದ್ದ ಡಾ‌.ಗಿರೀಶ್ ರವರು ಕೊಳ್ಳೆಗಾಲ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೆ.30 ರಂದು ವರ್ಗಾವಣೆಗೊಂಡಿದ್ದಾರೆ.
ಇವರು ಕಳೆದ ಎರಡೂವರೆ ವರ್ಷದಿಂದ ಬೆಳ್ಳಾರೆ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
ಈಗ ಬೆಳ್ಳಾರೆಗೆ ಆರ್.ಬಿ.ಎಸ್.ಕೆಯ ಡಾ.ಅನುಶ್ರೀಯವರು ಸೋಮವಾರ ,ಮಂಗಳವಾರ,ಬುಧವಾರ ಮೂರು ದಿನ ಹಾಗೂ ಡಾ.ನಿಶ್ಚಿತಾ ರವರು ಗುರುವಾರ,ಶುಕ್ರವಾರ,ಶನಿವಾರ ಮೂರು ದಿನ ಕರ್ತವ್ಯ ನಿರ್ವಹಿಸುತ್ತಿದ್ದಾರೆ.