ಅ.15-23: ಕುಕ್ಕಟ್ಟೆ ಶ್ರೀ ಕಾಳಿಕಾ ಪರಮೇಶ್ವರಿ ಭದ್ರಕಾಳಿ ದೇವಸ್ಥಾನ ನವರಾತ್ರಿ ಪೂಜಾ ಮಹೋತ್ಸವ

0

ಮುರುಳ್ಯ ಗ್ರಾಮದ ಕುಕ್ಕಟ್ಟೆ ಶ್ರೀ ಕಾಳಿಕಾ ಪರಮೇಶ್ವರಿ ಭದ್ರಕಾಳಿ ದೇವಸ್ಥಾನಲ್ಲಿ ಅ.15 ರಿಂದ 23 ರವರೆಗೆ ನವರಾತ್ರಿ ಪೂಜಾ ಮಹೋತ್ಸವವು ನಡೆಯಲಿರುವುದು.ಏಳನೆಯ ಪೂಜೆ ಮತ್ತು ಎಂಟನೆಯ ಪೂಜೆಯಂದು ವಿಶೇಷ ಪೂಜೆ ನಡೆಯಲಿರುವುದು.

ಅ.22 ರಂದು ಬೆಳಿಗ್ಗೆ ಆದಿತ್ಯವಾರ ದುರ್ಗಾಹೋಮ,ಮಧ್ಯಾಹ್ನ ವಿಶೇಷ ಪೂಜೆ, ಅನ್ನ ಸಂತರ್ಪಣೆ,ಅಪರಾಹ್ನ ಮಹಾಸಭೆ, ಸಾಯಂಕಾಲ ಮಹಾಪೂಜೆ, ಅನ್ನಸಂತರ್ಪಣೆ.ಅ.23 ರಂದು ಬೆಳಿಗ್ಗೆ ಭಜನೆ,ವಾಹನ ಪೂಜೆ,ರಾತ್ರಿ ಮಹಾಪೂಜೆ,ಅನ್ನಸಂತರ್ಪಣೆ. ನವರಾತ್ರಿ ಉತ್ಸವದಲ್ಲಿ ರಂಗಪೂಜೆ,ಗಣಹೋಮ,ದುರ್ಗಾನಮಸ್ಕಾರ ಪೂಜೆ,ಪಂಚಾಮೃತ ಅಭಿಷೇಕ,ಸಪ್ತಪತಿ ಪಾರಾಯಣ,ಲಲಿತಾ ಸಹಸ್ರ ನಾಮಾಚರಣೆ,ಶ್ರೀ ದೇವಿ ಅಷ್ಟೋತ್ತರ,ಕುಂಕುಮಾರ್ಚನೆ,ಇನ್ನಿತರ ಸೇವೆಗಳು ನಡೆಯುತ್ತವೆ.ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕಾಗಿ ದೇವಳದ ಪ್ರಕಟಣೆ ತಿಳಿಸಿದೆ.