ಮಗುವಿನ ಚಿಕಿತ್ಸೆಗೆ ನೆರವು ನೀಡಿದ ಆದಿ ದ್ರಾವಿಡ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ಮಗುವಿನ ಮನೆಗೆ ಭೇಟಿ

0

ಬೆಳ್ಳಾರೆ ಗ್ರಾಮದ ಮೂಡಾಯಿತೋಟ ಶಶಿಧರ ಮತ್ತು ಶ್ರೀಮತಿ ಮಮತಾ ದಂಪತಿಗಳ ಈರ್ವರು ಪುತ್ರಿಯರಲ್ಲಿ ಮೂರುವರೆ ವರುಷದ ಧನ್ಯಶ್ರೀ ಎಂಬ ಮಗುವಿಗೆ ಮೂರು ತಿಂಗಳ ಹಿಂದೆ ತಲೆನೋವು ಉಂಟಾಗಿದ್ದು, ಚಿಕಿತ್ಸೆಗೆ ವೈದ್ಯರ ಬಳಿ ತೋರಿಸಿದಾಗ ಮಗುವಿನ ತಲೆಯಲ್ಲಿ ಗೆಡ್ಡೆ ಉಂಟಾಗಿದೆ ಎಂದು ತಿಳಿಯಿತು. ವೈದ್ಯರು ತಲೆಯ ಗೆಡ್ಡೆಯನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆಯುವಂತೆ ಸಲಹೆ ನೀಡಿದರು.

ಅವರಲ್ಲಿ ಶಸ್ತ್ರಚಿಕಿತ್ಸೆಗೆ ಬೇಕಾಗುವಷ್ಟು ಹಣವಿಲ್ಲದಿದ್ದುದರಿಂದ ಅವರ ಖಾತೆಯ ಕ್ಯೂ ಆರ್ ಕೋಡ್ ಕಳುಹಿಸಿ ದಾನಿಗಳು ನೆರವು ನೀಡಲು ಕೋರಿಕೊಂಡರು.
ಆಗ ಆದಿದ್ರಾವಿಡ ಸಮಾಜ ಸೇವಾ ಸಂಘ, ಯುವ ವೇದಿಕೆ ಅಲ್ಲದೆ ಹಲವಾರು ಸಂಘ ಸಂಸ್ಥೆಗಳಿಂದ, ಜನರಿಂದ, ರಾಜಕೀಯ ನೇತಾರರು, ಶಾಸಕರು, ಗ್ರಾ.ಪಂ ನ ಸದಸ್ಯರು, ಸೇರಿ ಹಣವನ್ನು ನೀಡಿದರು.

ಮಗುವಿಗೆ ಮಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿದ ಬಳಿಕ ಮಗು ಚೇತರಿಸಿಕೊಂಡು ಆರೋಗ್ಯವಾಗಿದೆ. ಚಿಕಿತ್ಸೆಗೆ ಸುಮಾರು 2 ಲಕ್ಷಕ್ಕಿಂತಲೂ ಹೆಚ್ಚು ಖರ್ಚಾಗಿದೆ.

ಇವರು ಈಗ ಮಮತಾರವರ ಚಿಕ್ಕಪ್ಪರಾದ ಉಬರಡ್ಕ ಮಿತ್ತೂರು ಗ್ರಾಮದ ಪಾನತ್ತಿಲ ಕಾಲನಿಯ ಶಿವರಾಮರವರ ಮನೆಯಲ್ಲಿ ಚಿಕಿತ್ಸೆಗಾಗಿ ಉಳಿದುಕೊಂಡಿದ್ದಾರೆ.
ಪಾನತ್ತಿಲ ಮನೆಗೆ ಅ.8 ರಂದು ಕರ್ನಾಟಕ ಆದಿದ್ರಾವಿಡ ಸಮಾಜ ಸೇವಾ ಸಂಘದ ರಾಜ್ಯ ಸಂಚಾಲಕ ಪ್ರೇಮನಾಥ್ ಬಲ್ಲಾಳ್ ಬಾಗ್ ಭೇಟಿ ನೀಡಿ ಮಗುವಿನ ಆರೋಗ್ಯ ವಿಚಾರಿಸಿದರು. ಮಗುವಿನ ಚಿಕಿತ್ಸೆಗೆ ಧನ ಸಹಾಯ ನೀಡಿದ ದಾನಿಗಳಿಗೆ ಹಾಗೂ ಆಸ್ಪತ್ರೆಗೆ ತೆರಳುವಲ್ಲಿ, ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಿದ ಶಾಸಕರಾದ ಭಾಗೀರಥಿ ಮುರುಳ್ಯರಿಗೆ ಮತ್ತು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಆದಿದ್ರಾವಿಡ ಸಮಾಜ ಸೇವಾ ಸಂಘದ ಗೌರವ ಸಲಹೆಗಾರ ಮೋಹನ್ ನೆಲ್ಲಿಗುಂಡಿ, ಪುತ್ತೂರು ತಾಲೂಕು ಆದಿದ್ರಾವಿಡ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಲೋಹಿತ್ ಅಮ್ಚಿನಡ್ಕ, ಜಾಲ್ಸೂರು ಗ್ರಾ.ಪಂ ಮಾಜಿ ಅಧ್ಯಕ್ಷ ಬಾಬು ಕದಿಕಡ್ಕ, ಪ್ರಮೋದ್ ತಿಂಗಳಾಡಿ, ದಿಲೀಪ್ ಕೊಡೊಯಾಲಬೈಲ್, ಚೋಮ ನಾವೂರು, ವಿಜಯ ಆಲಡ್ಕ, ರಾಘವ ಎಂ.ಎ, ಗಿರೀಶ್, ಪ್ರವೀಣ್ ಅಮ್ಚಿನಡ್ಕ, ಶ್ರವಣ್ ಕೊಡಿಯಾಲಬೈಲ್, ಉಬರಡ್ಕ ಗ್ರಾ.ಪಂಚಾಯತ್ ಸದಸ್ಯ ಸಂದೀಪ್, ಯುವ ವೇದಿಕೆ ಪದಾಧಿಕಾರಿಗಳು ಹಾಗೂ ಹಲವಾರು ಸಂಘ ಸಂಸ್ಥೆಗಳ ಸದಸ್ಯರು, ಕಾಲನಿಯ ಸದಸ್ಯರು ಉಪಸ್ಥಿತರಿದ್ದರು.