ಇಸ್ರೇಲ್ ನಲ್ಲಿರುವ ಐವರ್ನಾಡಿನ ಕುಟುಂಬ ಸುರಕ್ಷಿತ

0

ಹಮಾಸ್ ಉಗ್ರರು ಇಸ್ರೇಲ್ ಮೇಲೆ ಯುದ್ಧ ಸಾರಿದ್ದು ಪ್ರತಿಯಾಗಿ ಇಸ್ರೇಲ್ ಕೂಡ ತನ್ನ ಸಾಮರ್ಥ್ಯ ತೋರಿಸಲು ಸಜ್ಜಾಗಿ ಉಗ್ರರು ಮತ್ತು ಇಸ್ರೇಲ್ ಸೇನೆ ನಡುವೆ ಯುದ್ದಗಳು ನಡೆಯುತ್ತಿದ್ದು ಅಪಾರ ಪ್ರಮಾಣದಲ್ಲಿ ಸಾವು ನೋವುಗಳು ಸಂಭವಿಸುತ್ತಿದೆ, ಇದೇ ಯುದ್ಧ ಭೂಮಿಯಲ್ಲಿ ಸುಳ್ಯ ಮೂಲದ ಕೆಲವರು ಕೂಡ ಇದ್ದಾರೆ ಎಂದು ತಿಳಿದು ಬಂದಿದೆ.

ಐವರ್ನಾಡು ಗ್ರಾಮದ ಬಾಂಜಿಕೋಡಿಯ ಪ್ರವೀಣ್ ಪ್ರಕಾಶ್ , ಅವರ ಪತ್ನಿ ಪ್ರೇಮ, ಪ್ರವೀಣ್ ಪ್ರಕಾಶ್ ಮಾವ ಎಡ್ವರ್ಡ್, ಬಾವ ನವೀನ್ ಇಸ್ರೇಲ್ ನಲ್ಲಿ ನೆಲೆಸಿದ್ದು ಅವರೆಲ್ಲ ಸುರಕ್ಷಿತವಾಗಿದ್ದಾರೆ ಎಂದು ಸುದ್ದಿಗೆ ತಿಳಿಸಿದ್ದಾರೆ.