ಸಾರ್ವಜನಿಕ ಸ್ಮಶಾನಕ್ಕೆ ಕಟ್ಟಿಗೆ ಸಂಗ್ರಹಕ್ಕೆ ಕರ ಸೇವೆ : ಪಂಜ ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ ಮಾದರಿ ಕಾರ್ಯ

0

ರಾಜ್ಯ ಪ್ರಶಸ್ತಿ ಪುರಸ್ಕೃತ
ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಪಂಜ ಗ್ರಾಮ ಪಂಚಾಯತ್ ನ ಸಾರ್ವಜನಿಕ ಮುಕ್ತಿಧಾಮ(ಸ್ಮಶಾನ)ಕ್ಕೆ ಕಟ್ಟಿಗೆ ಸಂಗ್ರಹ ಮಾಡುವ ಕರ ಸೇವೆಯು ಅಕ್ಟೋಬರ್ 15 ರಂದು ನಡೆಯಿತು.

ಕಳೆದ ಲಾಕ್ ಡೌನ್ ಸಂದರ್ಭದಲ್ಲಿ ಮೃತ ಪಟ್ಟವರ ಅಂತ್ಯಕ್ರಿಯೆಗೆ ಕಟ್ಟಿಗೆ ಸಂಗ್ರಹಿಸಲು ಮೃತರು ಸಂಬಂಧಿಕರು ಕಷ್ಟ ಪಡುತ್ತಿದ್ದ ಸಂದರ್ಭದಲ್ಲಿ ಅಗ್ಯತ್ಯಕ್ಕೆ ಬೇಕಾದಷ್ಟು ಕಟ್ಟಿಗೆ ಕ್ಲಬ್ ವತಿಯಿಂದ ಸಂಗ್ರಹ ಮಾಡಿ ಒದಗಿಸಲಾಗಿತ್ತು . ಈ ವರ್ಷವೂ ಕಟ್ಟಿಗೆ ಕೊರತೆಯನ್ನು ಮನಗಂಡು ಪಂಜ ಗ್ರಾಮ ಪಂಚಾಯತ್ ಸಹಕಾರದೊಂದಿಗೆ ಅಗತ್ಯಕ್ಕೆ ಬೇಕಾದ ಕಟ್ಟಿಗೆ ಸಂಗ್ರಹಿಸಿದ್ದಾರೆ.


ಕರ ಸೇವೆಯಲ್ಲಿ ಕ್ಲಬ್ ನ 3೦ ಸದಸ್ಯರು ಪಾಲ್ಗೊಂಡಿದ್ದರು.