ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳಿಗೊಳಪಟ್ಟ ಪಂಚಸ್ಥಾಪನೆಗಳ ಮುಂಡೋಡಿ ಮಾಳಿಗೆಯ ಜೀರ್ಣೋದ್ಧಾರ ಕಾರ್ಯ ಆರಂಭಗೊಂಡಿದ್ದು, ಜೀರ್ಣೋದ್ಧಾರದ ಸಭೆ ಇಂದು ಮುಂಡೋಡಿಯಲ್ಲಿ ನಡೆಯಿತು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಕಿಶೋರ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಹರೀಶ್ ಕಂಜಿಪಿಲಿ, ಪಂಚಸ್ಥಾಪನೆಗಳ ವ್ಯವಸ್ಥಾಪನೆಗಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಘವ ಗೌಡ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ಶಾಂತಪ್ಪ ರೈಅಂಗಡಿಮಜಲು, ಮಂಟಮೆ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಾಧವ ಗೌಡ ಹರ್ಲಡ್ಕ ಉಪಸ್ಥಿತರಿದ್ದರು. ಸಭೆಯಲ್ಲಿ ರಾಮಚಂದ್ರ ಹಲ್ದಡ್ಕ, ಸುದರ್ಶನ ಕೊಯಿಂಗೋಡಿ, ವೀರಪ್ಪ ಗೌಡ ಮಿನುಂಗೂರು, ಗೋವಿಂದ ಅಳವುಪಾರೆ, ದಯಾನಂದ ಕೊರತ್ತೋಡಿ, ಪುರುಷೋತ್ತಮ ಸುಳ್ಳಿ, ಕೃಷ್ಣಪ್ಪ ಹರ್ಲಡ್ಕ, ವಿನೋದ್ ಮೂಡಗದ್ದೆ, ಹರೀಶ ಯಂ, ಗಿರಿಧರ ಮುಂಡೋಡಿ, ಚೋಮ ಯಂ., ರೋಹಿತಾಕ್ಷ ಕಂಜಿಪಿಲಿ, ಗಣೇಶ್ ಕುದ್ಕುಳಿ, ಯತೀಶ ಕಂಜಿಪಿಲಿ, ಸೀತಾರಾಮ ಎಸ್., ಚೆನ್ನಕೇಶ ದೋಳ ಉಪಸ್ಥಿತರಿದ್ದರು.
ಸಭೆಯಲ್ಲಿ ಧನ ಸಂಗ್ರಹದ ಬಗ್ಗೆ, ಕೆಲಸ ಕಾರ್ಯದ ಬಗ್ಗೆ ಚರ್ಚಿಸಲಾಯಿತು.