ಸುಪ್ರೀಂ ಕೋರ್ಟ್‌ನಿಂದ ಮೇಲ್ಮನವಿ
ಸ್ವೀಕಾರ
ಅ.17ರಂದು ಹಿಯರಿಂಗ್
ಪ್ರೊಎ.ಎಸ್.ರಾಮಕೃಷ್ಣರ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿರುವ ಡಾ.ಕೆ.ವಿ.ರೇಣುಕಾಪ್ರಸಾದರನ್ನು ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಜೀವಾವಧಿ ಶಿಕ್ಷೆ ಘೋಷಣೆಯಾದಾಗ 63 ವರ್ಷ ವಯಸ್ಸಿನ ತಾನು ಮಾನಸಿಕವಾಗಿ ಜರ್ಝರಿತರಾಗಿದ್ದು, ಆರೋಗ್ಯ ಸ್ಥಿತಿಯು ಹದಗೆಟ್ಟಿದೆಯೆಂದು ರೇಣುಕಾಪ್ರಸಾದರು ನ್ಯಾಾಯಾಧೀಶರೊಡನೆ ಹೇಳಿದ ಕಾರಣ ಅವರನ್ನು ಅಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಡಾ.ರೇಣುಕಾಪ್ರಸಾದ್‌ರಿಗೆ ಹೃದಯ ಸಂಬಂಧಿ ಸಮಸ್ಯೆ ಇರುವುದರಿಂದ ಕಾಯಿಲೆಯೂ ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರನ್ನು ಅ.13 ರಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸಿ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.
ಸುಪ್ರೀಂಕೋರ್ಟ್‌ಗೆ ಮೇಲ್ಮನವಿ
-ಅ.17 ರಂದು ಹಿಯರಿಂಗ್
ಜೀವಾವಧಿ ಶಿಕ್ಷೆಗೊಳಗಾಗಿರುವ ಡಾರೇಣುಕಾ ಪ್ರಸಾದ್ ರವರಿಗೆ ವಿಧಿಸಲಾದ ಶಿಕ್ಷೆ ರದ್ದುಗೊಳಿಸಲಿಕ್ಕಾಾಗಿ ತಡೆಯಾಜ್ಞೆ ತರಲು ಅವರ ಪರ ನ್ಯಾಾಯವಾದಿಗಳು ಸುಪ್ರೀಂಕೋರ್ಟ್‌ನ ಮೆಟ್ಟಿಲೇರಿರುವುದಾಗಿ ತಿಳಿದುಬಂದಿದೆ. ನ್ಯಾಯವಾದಿ ಸಿದ್ಧಾರ್ಥ ಲೂತ್ರಾ ನೇತೃತ್ವದಲ್ಲಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿದ್ದು, ಅದರ ಹಿಯರಿಂಗ್ ಅ.17 ರಂದು ನಡೆಯಲಿರುವುದಾಗಿ ತಿಳಿದುಬಂದಿದೆ.