ಪತ್ರಕರ್ತ ಗುರುವಪ್ಪ ಬಾಳೆಪುಣಿ ನಿಧನರಾದರೆಂಬ ವದಂತಿ

0

ಅವಸರದ ಸುದ್ದಿಯಿಂದಾಗಿ ಮಾಧ್ಯಮಗಳಲ್ಲಿ ನಿಧನದ ವರದಿ

ಗಂಭೀರ ಪರಿಸ್ಥಿತಿಯಲ್ಲಿರುವ ಗುರುವಪ್ಪ ಬಾಳೆಪುಣಿ

ಪತ್ರಕರ್ತ ಎನ್.ಟಿ. ಗುರುವಪ್ಪ ಬಾಳೆಪುಣಿಯವರು ನಿಧನರಾದರೆಂಬ ಸುದ್ದಿಯ ಹಿನ್ನೆಲೆಯಲ್ಲಿ ಎಲ್ಲಾ ಮಾಧ್ಯಮಗಳು ಅವರ ನಿಧನ ವಾರ್ತೆಯನ್ನು ಪ್ರಸಾರ ಪಡಿಸಿದ್ದೆವು. ಆದರೆ ಅವರು ಗಂಭೀರ ಪರಿಸ್ಥಿತಿಯಲ್ಲಿ ಇದ್ದಾರೆಯೇ ಹೊರತು ಕೊನೆಯುಸಿರೆಳೆದಿಲ್ಲ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.


ಕೆಲವು ದಿನಗಳಿಂದ ಅಸೌಖ್ಯದಿಂದಿರುವ ಪತ್ರಕರ್ತ ಗುರುವಪ್ಪ ಬಾಳೆಪುಣಿಯವರ ಸ್ಥಿತಿ ಅತ್ಯಂತ ಗಂಭೀರವಾಗಿರುವುದಾಗಿಯೂ, ಕೆಲವೇ ಗಂಟೆಗಳು ಮಾತ್ರ ಅವರು ಬದುಕಿರಬಹುದೆಂದು ವೈದ್ಯರು ಹೇಳಿದರೆಂದೂ, ಇದರಿಂದಾಗಿ ಅವರ ನಿಧನದ ವದಂತಿ ಹಬ್ಬಿತೆಂದು ಹೇಳಲಾಗುತ್ತಿದೆ. ಮಾಧ್ಯಮಗಳ ವರದಿಯ ಹಿನ್ನಲೆಯಲ್ಲಿ ಅವರ ಅಭಿಮಾನಿಗಳು ಮತ್ತು ಮಿತ್ರರು ಮನೆಗೆ ಧಾವಿಸುತ್ತಿದ್ದಾರೆಂದು ತಿಳಿದು ಬಂದಿದೆ.