ಸುಳ್ಯ ಇನ್ನರ್ವಿಲ್ ಕ್ಲಬ್ ಗೆ ಜಿಲ್ಲಾಧ್ಯಕ್ಷರ ಅಧಿಕೃತ ಭೇಟಿ

0

ಸುಳ್ಯ ಇನ್ನರ್ವಿಲ್ ಕ್ಲಬ್ ಗೆ ಜಿಲ್ಲೆ 318 ಇದರ ಜಿಲ್ಲಾಧ್ಯಕ್ಷೆ ಪೂರ್ಣಿಮಾ ರವಿ ಇವರು ಅಧಿಕೃತ ಭೇಟಿ ಕಾರ್ಯಕ್ರಮ ಅ.15 ರಂದು‌ ನಡೆಯಿತು.

ಕ್ಲಬ್ ನ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಿದ ಇವರು ಇನ್ನರ್ ವೀಲ್ ಕ್ಲಬ್ ಸುಳ್ಯ ಇವರು ಸಂದೀಪ್ ಶಾಲೆಗೆ ಕೊಡುಗೆಯಾಗಿ ನೀಡಿದ ಟಿವಿಯನ್ನು ಹಸ್ತಾಂತರಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅಜ್ಜಾವರದ ಬಯಂಬು ಕಾಲೋನಿ ವಿದ್ಯಾರ್ಥಿ ರಕ್ಷಿತ್ ನ ವೈದ್ಯಕೀಯ ಶಿಕ್ಷಣಕ್ಕೆ ಧನಸಹಾಯವನ್ನು ಮಾಡಲಾಯಿತು .ಹಾಗೆಯೇ ಪ್ರತಿಕ್ಷಾ ಎಂಬ ಯುವತಿಗೆ ಹೊಲಿಗೆ ತರಬೇತಿಗಾಗಿ ಸಹಾಯಧನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಇನ್ನರ್ ವೀರ್ ಸಂಚಿಕೆ ಇನ್ನರ್ ಸ್ಪೂರ್ತಿಯನ್ನು ರೋಟರಿ ಕ್ಲಬ್ ಸುಳ್ಯ ಇದರ ಅಧ್ಯಕ್ಷರಾದ ಆನಂದ ಕಂಡಿಗ ಅವರು ಬಿಡುಗಡೆಗೊಳಿಸಿದರು.

ಶ್ರೀಮತಿ ಮೀನ ಸುಂದರವರು ಪ್ರಾರ್ಥಿಸಿದರು.
ಸೌಮ್ಯರವಿ ಪ್ರಸಾದ್ ರವರು ಇನ್ನರ್ವೀಲ್ ಪ್ರಾರ್ಥನೆ ಮಾಡಿದರು.

ಸುಳ್ಯ ಇನ್ನರ್ ವೀಲ್ ಕ್ಲಬ್ ನ ಅಧ್ಯಕ್ಷೆ ಸವಿತಾ ನಾರ್ಕೋಡು, ಕಾರ್ಯದರ್ಶಿ ಚಿಂತನ ಸುಬ್ರಮಣ್ಯ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಇನ್ನರ್ ವೀಲ್ ಉಪಾಧ್ಯಕ್ಷೆ ಜಯಲಕ್ಷ್ಮಿ ಜೆ ರೈ ಧನ್ಯವಾದ ಸಮರ್ಪಿಸಿದರು. ಶ್ರೀಮತಿ ಯೋಗಿತ ಗೋಪಿನಾಥ್ ಹಾಗೂ ಶ್ರೀಮತಿ ಶೈಮಾ ಜಿತೇಂದ್ರ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಮನೋರಂಜನ ಕಾರ್ಯಕ್ರಮ ನಡೆಯಿತು.