ಗುತ್ತಿಗಾರು ಸೈಂಟ್ ಮೇರಿಸ್ ಚರ್ಚಿನ ದಿವ್ಯ ಬಾಲರ ಸಂಘಕ್ಕೆ ಸಮಗ್ರ ಬಹುಮಾನ

0

ಗುತ್ತಿಗಾರು, ಸೈಂಟ್ ಮೇರಿಸ್ ಚರ್ಚಿನ ಅಧೀನದ ದಿವ್ಯ ಬಾಲರ ಸಂಘಕ್ಕೆ, ಕುಟ್ರಪಾಡಿ ವಲಯ ಮಟ್ಟದ ಬೈಬಲ್ ಪ್ರತಿಭಾ ಕಾರಂಜಿಯಲ್ಲಿ ಸಮಗ್ರ ಪ್ರಶಸ್ತಿ ಲಭಿಸಿದೆ.

ಕುಟ್ರಪಾಡಿ ವಲಯ ಮಟ್ಟದ ಬೈಬಲ್ ಪ್ರತಿಭಾ ಕಾರಂಜಿಯಲ್ಲಿ ಬೈಬಲ್ ರಸ ಪ್ರೆಶ್ನೆಯಲ್ಲಿ ಪ್ರಥಮ, ಆಕ್ಷನ್ ಸಾಂಗ್ ಪ್ರಥಮ, ಚದ್ಮ ವೇಷ ಪ್ರಥಮ ಮತ್ತು ದ್ವಿತೀಯ, ನೃತ್ಯ ಪ್ರಥಮ ಮತ್ತು ದ್ವಿತೀಯ, ಕಥೆ ಹೇಳುವುದರಲ್ಲಿ ಪ್ರಥಮ, ಸಿಂಗಲ್ ಸಾಂಗ್ ಪ್ರಥಮ. ಒಟ್ಟಾಗಿ ಆರು ಪ್ರಥಮ ಮತ್ತು ಎರಡು ದ್ವಿತೀಯ ಬಹುಮಾನಗಳೊಂದಿಗೆ ವಲಯ ಮಟ್ಟದಲ್ಲಿ ಸಮಗ್ರ ಪ್ರಶಸ್ತಿಗೆ ಅರ್ಹರಾದರು. ಸ್ಪರ್ಧಾಳುಗಳಾಗಿ ಕುಮಾರಿ ಅಲ್ನ ಮೇರಿ, ಕುಮಾರಿ ಮೀವಲ್, ಕುಮಾರಿ ನಿಕೊಲ್, ಕುಮಾರಿ ಜೋನ, ಮಾಸ್ಟರ್ ಜೆಫ್, ಮಾಸ್ಟರ್ ಎಡೆನ್, ಮಾಸ್ಟರ್ ನಾಥನಿಯೇಲ್ ಭಾಗವಹಿಸಿದರು.