ಸಭಾಂಗಣದಲ್ಲಿ ಕಿಕ್ಕಿರಿದು ಸೇರಿದ ಗ್ರಾಮಸ್ಥರು
ಹಿಂದು ಜಾಗರಣಾ ವೇದಿಕೆ ಮಂಡೆಕೋಲು ಮತ್ತು ಸಾರ್ವಜನಿಕ ಆಯುಧ ಪೂಜಾ ಸೇವಾ ಸಮಿತಿ ಮಂಡೆಕೋಲು ಇದರ ಸಂಯುಕ್ತ ಆಶ್ರಯದಲ್ಲಿ ೩ ನೇ ವರ್ಷದ ಆಯುಧ ಪೂಜಾ ಕಾರ್ಯಕ್ರಮ ಮಂಡೆಕೋಲು ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ಅ.೨೧ ರಂದು ನಡೆಯಿತು.
ಈ ಸಂದರ್ಭದಲ್ಲಿ ಹಿಂದು ಜಾಗರಣಾ ವೇದಿಕೆಯ ತಾಲೂಕು ಸಂಚಾಲಕ ಮಹೇಶ್ ಉಗ್ರಾಣಿಮನೆ, ಸಾರ್ವಜನಿಕ ಆಯುಧ ಪೂಜಾ ಸೇವಾ ಸಮಿತಿ ಸಂಚಾಲಕ ಕುಮಾರನ್ ಮಾವಂಜಿ, ಮಂಡೆಕೋಲು ಹಿಂದುಜಾಗರಣ ವೇದಿಕೆ ಸಂಚಾಲಕ ಹೇಮಂತ್ ಮಂಡೆಕೋಲು, ಗ್ರಾ.ಪಂ.ಸದಸ್ಯ ಬಾಲಚಂದ್ರ ದೇವರಗುಂಡ, ರಘುಪತಿ ಉಗ್ರಾಣಿಮನೆ, ಪೂರ್ಣಚಂದ್ರ ಕಣೆಮರಡ್ಕ, ಲಕ್ಷ್ಮಣ ಉಗ್ರಾಣಿಮನೆ, ಅಶ್ವತ್ ಕಣೆಮರಡ್ಕ, ಗಂಗಾಧರ ಮಾವಂಜಿ, ಸುಂದರ ಗೌಡ ಕಾಡುಸೊರಂಜ, ಪದ್ಮನಾಭ ಪಾತಿಕಲ್ಲು, ವಸಂತಿ ಉಗ್ರಾಣಿಮನೆ, ಸಂಧ್ಯಾ ಮಂಡೆಕೋಲು ಹಾಗೂ ಜಾಗರಣ ವೇದಿಕೆಯ ಪ್ರಮುಖ ಕಾರ್ಯಕರ್ತರು, ಮೊದಲಾದವರಿದ್ದರು.
ಉದಯಕುಮಾರ್ ಆಚಾರ್ ಹಾಗೂ ನಾರಾಯಣ ಶಿಬರಾಯರು ಪೂಜಾ ಕಾರ್ಯ ನೆರವೇರಿಸಿದರು.
ಸಂಜೆ ೫ರಿಂದ ಸ್ಥಳೀಯ ಪುಟಾಣಿಗಳಿಂದ ಕಾರ್ಯಕ್ರಮ ನಡೆಯಿತು. ನಾಟ್ಯನೂಪುರಂ ಶಾಸ್ತ್ರೀಯ ನೃತ್ಯ ಕಾರ್ಯಕ್ರಮ ಅಭಿಷೇಕ್ ಎಂ. ಮಂಡೆಕೋಲು ಕಣೆಮರಡ್ಕ ಗುರುವಿದುಷಿ ಯೋಗೀಶ್ವರಿ ಜಯಪ್ರಕಾಶ ವೈಷ್ಣವಿ ನಾಟ್ಯಾಲಯ ಪುತ್ತೂರು ಇವರಿಂದ. ಬಳಿಕ ನೃತ್ಯ ವೈಭವ – ಸ್ವರೂಪ್ ಕಣೆಮರಡ್ಕ, ಸುದಿಶ್ ಕಣೆಮರಡ್ಕ, ಮನ್ವಿತ್ ಮಿತ್ತಿಲ ಮಂಡೆಕೋಲು, ಕು.ತನಿಷ್ಕ ಬಿ, ಕು.ಪೂರ್ವಿ ಬಿ., ಕಿಶನ್ ಬೇಮಗತ್ತಮಲೆ ಮಂಡೆಕೋಲು ಇವರಿಂದ ನಡೆಯಿತು. ಬಳಿಕ ವಿಜಿತ್ ಮೈತಡ್ಕ ಮತ್ತು ತಂಡದವರಿಂದ ಕೊಳಲುವಾದನ ನಡೆಯಿತು.