ಸುಳ್ಯ ದಸರಾದಲ್ಲಿ ರಂಜಿಸಿದ ರಂಗಮಯೂರಿ ಕಲಾ ಶಾಲೆಯ ಸಾಂಸ್ಕೃತಿಕ ವೈಭವ

0

ಸುಳ್ಯ ದಸರಾ ಉತ್ಸವದ ಶ್ರೀ ಶಾರದಾಂಬಾ ಕಲಾ ವೇದಿಕೆಯಲ್ಲಿ ರಂಗಮಯೂರಿ ಕಲಾ ಶಾಲೆಯ ಪ್ರತಿಭಾನ್ವಿತ ಕಲಾವಿದರಿಂದ ಸಾಂಸ್ಕೃತಿಕ ವೈಭವ ಕಾರ್ಯಕ್ರಮವು ಅ.24 ರಂದು ನಡೆಯಿತು.

ಕಲಾ ಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲು ನಿರ್ದೇಶನದಲ್ಲಿ ಸುಮಾರು 100 ಕ್ಕೂ ಮಿಕ್ಕಿ ಕಲಾವಿದರಿಂದ ವಿವಿಧ ವಿನೋದಾವಳಿಯ ನೃತ್ಯ ಪ್ರದರ್ಶನ ಜನಮನಸೂರೆಗೊಂಡಿತು. ರಾಷ್ಟ್ರ ಕವಿಗಳ ರಚನೆಯಲ್ಲಿ ಮೂಡಿ ಬಂದ ಜನಪದ ತತ್ವ ಪದಗಳಿಗೆ ಹಾಗೂ ಹಿಂದಿ ಕನ್ನಡ ಚಿತ್ರದ ಗೀತೆಗಳಿಗೆ ಕಿರಿಯ ಹಾಗೂ ಹಿರಿಯ ಕಲಾವಿದರು ಹೆಜ್ಜೆ ಹಾಕಿ ಮೆಚ್ಚುಗೆ ಗಳಿಸಿಕೊಂಡರು. ಝೀ ವಾಹಿನಿ ಖ್ಯಾತಿಯ ನೃತ್ಯ ಪಟು ರಾಹುಲ್ ರಾವ್ ಮೈಸೂರು ತಂಡದಿಂದ ಆಕರ್ಷಕ ನೃತ್ಯ ಪ್ರದರ್ಶನವಾಯಿತು.


ಕಾರ್ಯಕ್ರಮದಲ್ಲಿ ಗಾಯಕರಾದ ಶಿವಪ್ರಸಾದ್ ಆಲೆಟ್ಟಿ, ಸ್ನೇಹ ಶೆಟ್ಟಿ ಮಂಗಳೂರು, ರಾಜೇಶ್ ಸುಳ್ಯ,ಶ್ರೀಮತಿ ಸೌಮ್ಯ ರವರು ಚಲನಚಿತ್ರ ಗೀತೆಗಳನ್ನು ಹಾಡಿ ಪ್ರೇಕ್ಷಕರ ಮನರಂಜಿಸಿದರು. ಶಶಿಕಾಂತ್ ಮಿತ್ತೂರು ಮತ್ತು ಸುಶ್ಮಿತಾ ಕಡಪಳ ಕಾರ್ಯಕ್ರಮ ನಿರೂಪಿಸಿದರು.
ನೃತ್ಯ ತರಬೇತುದಾರರಾದ ವಿನೋದ್ ಕರ್ಕೇರ, ಪೃಥ್ವಿ ನಾಯಕ್, ಶ್ರೀಮತಿ ಜಯಕೃಷ್ಣ ಕಾಯರ್ತೋಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ರಂಗ ಮಯೂರಿ ಕಲಾಶಾಲೆಯ ಪೋಷಕ ಕಮಿಟಿಯ ಸದಸ್ಯರು ಸಹಕರಿಸಿದರು. ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರಿದ್ದರು.