ವೇತನ ಹೆಚ್ಚಳ ಸಹಿತ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನ.7 ರಂದು ಅಕ್ಷರ ದಾಸೋಹ ನೌಕರರ ಮುಷ್ಕರ

0

ವೇತನ ಹೆಚ್ಚಳ ಸಹಿತ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನ.7ರಂದು ಅಕ್ಷರ ದಾಸೋಹ ನೌಕರರು ಮುಷ್ಕರ ನಡೆಸಲಿದ್ದಾರೆ ಎಂದು ಸಿಐಟಿಯು ಪ್ರಧಾನ ಕಾರ್ಯದರ್ಶಿ ಕೆ.ಪಿ. ರಾಬರ್ಟ್ ಡಿಸೋಜ ತಿಳಿಸಿದ್ದಾರೆ.

ಅಕ್ಷರ ದಾಸೋಹ ನೌಕರರು ಹಲವಾರು ವರ್ಷಗಳಿಂದ ತಮ್ಮ ಬೇಡಿಕೆಗಳ ಬಗ್ಗೆ ಹಲವಾರು ಬಾರಿ ಮನವಿ ಹೋರಾಟಗಳನ್ನು ನಡೆಸಿದರೂ ಸರಕಾರ ಅವರ ವೇತನ ಮತ್ತು ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದ್ದು ಕಳೆದ ಸರಕಾರ ವೇತನದಲ್ಲಿ 1 ಸಾವಿರ ಹೆಚ್ಚಳ ಬಗ್ಗೆ ಭರವಸೆ ನೀಡಿದ್ದರು. ಈ ತನಕ ಅದನ್ನು 3,700/- ರೂಗಳಿಗೆ ದುಡಿಯುತ್ತಿರುವ ಈ ನೌಕರರು ಬಿಸಿಯೂಟ ಬಂದ್ ಮಾಡಿ ಹೋರಾಟ ನಡೆಸುವುದು ಅನಿವಾರ್ಯವಾಗಿದೆ.


ಹೋರಾಟದ ಸಂದರ್ಭದಲ್ಲಿ ಮಾತ್ರ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಭರವಸೆ ನೀಡುವ ಸರಕಾರ ಮತ್ತೆ ಅವರನ್ನು ಮರೆತುಬಿಡುತ್ತದೆ. ಸರಕಾರವನ್ನು ನಿದ್ದೆಯಿಂದ ಎಬ್ಬಿಸಲು ಅಕ್ಷರದಾಸೋಹ ನೌಕರರು 30/10/2023ರಿಂದ 07/11/2023 ರವರೆಗೆ ಬೆಂಗಳೂರಿನಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ಹೋರಾಟ ನಡೆಸಲು ತೀರ್ಮಾನಿಸಿದ್ದು ನವೆಂಬರ್ 7ರಂದು ಬಿಸಿಯೂಟ ಸಂಪೂರ್ಣ ಬಂದ್‌ ಮಾಡಿ ವಿಧಾನ ಸೌಧ ಚಲೋ ನಡೆಸಲು ತೀರ್ಮಾನಿಸಲಾಗಿದೆ.

ಸುಳ್ಯದಿಂದ ಕೂಡಾ ನಮ್ಮ ನೌಕರರು ಭಾಗವಹಿಸುವರೆಂದು ಅಕ್ಷರ ದಾಸೋಹ ನೌಕರರ ಸಂಘದ ಗೌರವಾಧ್ಯಕ್ಷರು ಸಿ.ಐ.ಟಿ.ಯು (CITU) ಪ್ರ.ಕಾರ್ಯದರ್ಶಿ ಕೆ.ಬಿ ರಾಬರ್ಟ್ ಡಿಸೋಜ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.