ಸುಬ್ರಹ್ಮಣ್ಯ:ಆಪತ್ಕಾಲಕ್ಕೆ ಇಲ್ಲದ ಆಸ್ಪತ್ರೆಗಳು

0

24×7 ಆಸ್ಪತ್ರೆಗಾಗಿ ಹೋರಾಟ ಆರಂಭಿಸುತ್ತೇವೆ

ಡಾl ರವಿ ಕಕ್ಕೆಪದವು ಹೇಳಿಕೆ

ಸುಬ್ರಹ್ಮಣ್ಯದಂತ ಪವಿತ್ರ ಯಾತ್ರಾ ಸ್ಥಳದಲ್ಲಿ ಸಂಜೆ ಆದರೆ ಪ್ರಾಥಮಿಕ ಚಿಕಿತ್ಸೆಗೂ ವ್ಯವಸ್ಥೆ ಇಲ್ಲ. ಇದಕ್ಕಾಗಿ 24×7 ಆಸ್ಪತ್ರೆ ಬೇಕಾಗಿದೆ. ಇದಕ್ಕೆ ಹೋರಾಟ ಆರಂಭಿಸುವುದಾಗಿ ಸುಬ್ರಹ್ಮಣ್ಯದ ಉದ್ಯಮಿ ಡಾl ರವಿ ಕಕ್ಕೆಪದವು ಹೇಳಿಕೆ ನೀಡಿದ್ದಾರೆ.

ನ.1 ರಂದು ವ್ಯಕ್ತಿಯೊಬ್ಬರು ರಸ್ತೆ ಬದಿ ಪಾರ್ಶ್ವವಾಯುಗೆ ತುತ್ತಾಗಿದ್ದು ಚಿಕಿತ್ಸೆ ನೀಡಲು ವ್ಯವಸ್ಥೆ ಗಳಿಲ್ಲದೆ ಠಾಣೆಯ ಶಿಫಾರಸ್ಸಿನ ಮೇರೆಗೆ ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಹಿಂದೆಯೂ ಹಲವು ಇಂತಹ ಪ್ರಕರಣಗಳಾಗಿದ್ದು ಕುಮಾರಧಾರ ಬಳಿ ಭಕ್ತಾಧಿಯೋರ್ವರು ಹೃದಯಾಘಾತವಾದಾಗ ಚಿಕಿತ್ಸೆ ಪ್ರಾಥಮಿಕ ಚಿಕಿತ್ಸೆ ಲಭಿಸದೆ ವ್ಯಕ್ತಿ ಮೃತ ಪಟ್ಟಿದ್ದರು. ಇಂತಹ ಪ್ರಕರಣ ಮರುಕಳಿಸುತಿದ್ದು ಇದಕ್ಕೆಲ್ಲಾ ಪರಿಹಾರ ಬೇಕಾಗಿದೆ ಎಂದವರು ಹೇಳಿದ್ದಾರೆ. ನಿನ್ನೆ ದಿನ ರೋಗಿಯೊಬ್ಬರನ್ನು ಸುಳ್ಯಕ್ಕೆ ಸಾಗಿಸುವಲ್ಲಿ ಅಟೋ ಚಾಲಕ ರವಿ, ಚಂದ್ರಶೇಖರ ಬಿಳಿನೆಲೆ, ಅಶ್ವಥ್, ಬಾಲಕೃಷ್ಣ , ಗಿರೀಶ್, ವಿಕಾಸ್, ಮೋಹನ್‌ ಕುಮಾರ್, ಕೃಷ್ಣಪ್ಪ, ಕುಮಾರ ಮತ್ತಿತರರು ಸಹಕರಿಸಿದರು.