ನ.ಪಂ.ಗೆ ಸದಸ್ಯ ರಿಯಾಜ್ ಕಟ್ಟೆಕಾರ್ ಮನವಿ
ಸುಳ್ಯ ನಗರ ಪಂಚಾಯತ್ ಒಡೆತನದಲ್ಲಿರುವ ಪುರಭವನವನ್ನು ಸಜ್ಜುಗೊಲಿಸಿ ಸಮಾರಂಭಗಳಿಗೆ ಒದಗಿಸಲು ಪಂಚಾಯತ್ ಸೂಕ್ತ ಕ್ರಮಕೈಗೊಳ್ಳಬೇಕೆಂದು ನಗರ ಪಂಚಾಯತ್ ಸದಸ್ಯ ರಿಯಾಜ್ ಕಟ್ಟೆಕಾರ್ ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ ರಿಗೆ ಮನವಿ ಸಲ್ಲಿಸಿದ್ದಾರೆ.
ಸುಳ್ಯ ನಗರ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಪುರಭವನ ಸುಸಜ್ಜಿತ ಹಾಗೂ ವಿಶಾಲ ಕಟ್ಟಡ ಹೊಂದಿದ್ದರೂ ಭವನದ ಎದುರು ಜಲ್ಲಿ, ಮಣ್ಣಿನ ರಾಶಿ ತುಂಬಿ ಸಾರ್ವಜನಿಕರಿಗೆ ಅಸಹ್ಯ ಭಾವನ ಮೂಡುತ್ತಿದೆ. ಮೂಲಬೂತ ಸೌಲಭ್ಯಗಳ ಕೊರತೆ, ನಿರ್ವಹಣೆ ಕೊರತೆ ಯಿಂದಾಗಿ ಮುಂದೆ ಶೀಘ್ರದಲ್ಲಿ ಪಾಳು ಬಿದ್ದ ಕಟ್ಟಡ ಆಗಬಹುದು ಎಂಬ ಭೀತಿಯಿದೆ. ಆದುದರಿಂದ ಪುರಭವನವನ್ನು, ಸಮಾರಂಭಗಳಿಗೆ ಬೇಕಾಗುವ ಹಾಗೆ, ಸುಸಜ್ಜಿತಗೊಳಿಸಿ, ಅಧುನೀಕರಿಸಿ, ನಿರ್ವಹಣೆ ಮಾಡಲು ಒಬ್ಬ ಪಂಚಾಯತ್ ಸಿಬ್ಬಂದಿಯನ್ನು ಅಥವಾ ನಗರ ಪಂಚಾಯತ್ ಮೂಲಕ ಸಮಿತಿ ರಚಿಸಿ ನೇಮಿಸಿ ಸಾರ್ವಜನಿಕ ಹಾಗೂ ಸರಕಾರಿ ಸಭೆ ಸಮಾರಂಭಗಳಿಗೆ ಬಾಡಿಗೆ ನೀಡುವುದರ ಮೂಲಕ ಮತ್ತು ಕಡು ಬಡವರಿಗೆ ರಿಯಾಯತಿ ದರದಲ್ಲಿ, ಅಥವಾ ಉಚಿತವಾಗಿ ನೀಡುವುದರೊಂದಿಗೆ ನಗರ ಪಂಚಾಯತ್ ಖಜಾನೆಗೂ ಆರ್ಥಿಕವಾಗಿ ಸಹಾಯ ಆಗುತ್ತದೆ. ಬಡ ಸಾರ್ವಜನಿಕರಿಗೂ ಅನುಕೂಲವಾಗುತ್ತದೆ. ಹಲವಾರು ಖಾಸಗಿ ಹಾಲ್ ಗಳು, ಕಾಲ ಕಾಲಕ್ಕೆ ಆಧುನೀಕರಿಸುತ್ತ, ಲಾಭದಿಂದಲೇ ಮುಂದುವರೆಸುತ್ತಿರುವುದನ್ನು ಗಮನಿಸಬೇಕು, ಆದರೆ ಪುರಭವನದಲ್ಲಿ ಕಳೆದ 4 ವರ್ಷದಲ್ಲಿ ಪುರಭವನದಲ್ಲಿ ನಡೆದ ಒಟ್ಟು ಸಮಾರಂಭಗಳು ಹಾಗೂ ಉಳಿತಾಯ ಆಗಿರುವ ಮೊತ್ತ ಎಷ್ಟು?. ಅದನ್ನು ಸುಸಜ್ಜಿತ ಗೊಳಿಸಿ ಬಾಡಿಗೆ ಕೊಟ್ಟರೆ ಸುಳ್ಯ ನಗರದ ಅಭಿವೃದ್ಧಿಗೆ ಅದನ್ನು ಬಳಸಬಹುದು.
ಇಚಿಷ್ಟೇ ಅಲ್ಲದೆ ಸುಳ್ಯ ನಗರ ವ್ಯಾಪ್ತಿಗೊಳಪಟ್ಟ ಪಂಚಾಯತ್ ಬಾಡಿಗೆ ಕೊಠಡಿ ಸುಮಾರು ಕೋಣೆಯನ್ನು ಏಲಂ ಮಾಡದೆ ಬಂದಾಗಿರುವ ಕಾರಣ ಸುಮಾರು 10 ಲಕ್ಷ ಪಂಚಾಯತ್ ಅಭಿವೃದ್ಧಿಗೆ ನಷ್ಟವಾಗಿದೆ. ಸಾರ್ವಜನಿಕ ತೆರಿಗೆ ಹಣವನ್ನು ಹಾಕಿ ಕಟ್ಟಿರುವ ಸರ್ಕಾರಿ ಕಟ್ಟಡವನ್ನು, ಪಾಳು ಬೀಳಲು ಬಿಡದೆ, ಸಾರ್ವಜನಿಕ ಸೇವೆಗೆ ಸಿದ್ಧವಾಗಲಿ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಶಹೀದ್ ಪಾರೆ ಜತೆಗಿದ್ದರು.