ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಭಜನೋತ್ಸವ -ಪ್ರಾರಂಭ

0

ಸಂಜೆ ಸಭಾಕಾರ್ಯಕ್ರಮ, ಅರ್ಚಕರಿಗೆ ಸನ್ಮಾನ

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಭಜನೋತ್ಸವ ಕಾರ್ಯಕ್ರಮವು ನ.5 ರಂದು ಪ್ರಾತ:ಕಾಲ 6.26 ರಿಂದ ಪ್ರಾರಂಭಗೊಂಡಿದ್ದು ಸೂರ್ಯಾಸ್ತ 6.02 ರ ತನಕ ನಡೆಯಲಿದೆ.
ದೇವಸ್ಥಾನದ ಪ್ರಧಾನ ಅರ್ಚಕ ಪದ್ಮನಾಭ ಭಟ್ ದೀಪ ಪ್ರಜ್ವಲನೆ ಮಾಡಿ ಶುಭಹಾರೈಸಿದರು.


ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಮಡ್ತಿಲ, ಭಜನೋತ್ಸವ ಸಂಯೋಜಕರಾದ ರಾಮಚಂದ್ರ ಪಲ್ಲತ್ತಡ್ಕ, ವ್ಯ. ಸಮಿತಿ ಸದಸ್ಯರಾದ
ಕರಿಯಪ್ಪ ಕೋಡ್ತೀಲು,ಶ್ರೀಮತಿ ಪದ್ಮಾವತಿ ಖಂಡಿಗೆಮೂಲೆ,ಶ್ರೀಮತಿ ತಾರಾ ಆರ್.ಉದ್ದಂಪಾಡಿ,ದೇವಿದಾಸ ಕೆ.ಕತ್ಲಡ್ಕ, ದಾಸಪ್ಪ ಗೌಡ ಕೋಡ್ತೀಲು,ವಾಮನ ಗೌಡ ಕೋಂದ್ರಮಜಲು,ದಯಾನಂದ ಸಿ.ಎಚ್.ಚೆಮ್ನೂರು,ಸಿಬ್ಬಂದಿ ವರ್ಗದವರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ಮಧ್ಯಾಹ್ನ ಮಹಾಪೂಜೆ,ಅನ್ನಸಂತರ್ಪಣೆ ನಡೆಯಲಿದೆ.


ಸಂಜೆ ಭಜನೆ ಸಮಾಪ್ತಿಯಾಗಲಿದೆ.
ಬಳಿಕ ಮಂಗಳಾರತಿ,ಪ್ರಸಾದ ವಿತರಣೆ ನಡೆಯಲಿದೆ.
ಸಂಜೆ ನಡೆಯುವ ಸಭಾ ಕಾರ್ಯಕ್ರಮವನ್ನು ಶಾಸಕಿ ಕು.ಭಾಗೀರಥಿ ಮುರುಳ್ಯ ಉದ್ಘಾಟಿಸಲಿದ್ದಾರೆ.
ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಮಡ್ತಿಲ ಅಧ್ಯಕ್ಷತೆ ವಹಿಸಲಿದ್ದಾರೆ.


ಸನ್ಮಾನ
ದೇವಸ್ಥಾನದ ಪ್ರಧಾನ ಅರ್ಚಕ ಪದ್ಮನಾಭ ಭಟ್, ವಸಿಷ್ಠ ಭಟ್ ಚೂಂತಾರು ಇವರನ್ನು ಸನ್ಮಾನಿಸಲಾಗುವುದು.
ಮುಖ್ಯ ಅತಿಥಿಗಳಾಗಿ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ,ಬೆಂಗಳೂರಿನ ಉದ್ಯಮಿ ಲಕ್ಷ್ಮೀನಾರಾಯಣ ಕಣಿಪ್ಪಿಲ, ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲೀಲಾವತಿ ಕುತ್ಯಾಡಿ,ಭಜನಾ ಪರಿಷತ್ ರಾಜ್ಯಾಧ್ಯಕ್ಷ ಬಾಲಕೃಷ್ಣ ಪುತ್ಯ,ದ.ಕ.ಜೇನು ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರು,ಗೆಳೆಯರ ಬಳಗ ದೇರಾಜೆ ಅಧ್ಯಕ್ಷ ಅರುಣ್ ಗುತ್ತಿಗಾರುಮೂಲೆ ಉಪಸ್ಥಿತರಿರುವರು.