ಕುಕ್ಕನ್ನೂರು ಶ್ರೀ ಕಿನ್ನಿಮಾಣಿ ಪೂಮಾಣಿ ದೈವಸ್ಥಾನಕ್ಕೆ ಸಂಬಂಧಿಸಿದ ನಾಯರ್ ದೈವದ ಟೊಪ್ಪಿ ಚಾವಡಿ ಜೀರ್ಣೋದ್ಧಾರದ ಮನವಿಪತ್ರ ಬಿಡುಗಡೆ

0

ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವದಲ್ಲಿ ಪ್ರಧಾನ ಪಾತ್ರ ವಹಿಸುವ ಕುಕ್ಕನ್ನೂರು ನಾಯರ್ ದೈವದ ಕುದುರೆ ಕುಂಞನ ಕೊಟ್ಟಿಗೆ ಜೀರ್ಣೋದ್ಧಾರಕ್ಕೆ ಸಿದ್ಧತೆ

ಶತಮಾನಗಳ ಇತಿಹಾಸವನ್ನು ಹೊಂದಿರುವ ಜಾಲ್ಸೂರು ಗ್ರಾಮದ ಕುಕ್ಕನ್ನೂರು ಶ್ರೀ ಕಿನ್ನಿಮಾಣಿ ಪೂಮಾಣಿ ದೈವಸ್ಥಾನಕ್ಕೆ ಸಂಬಂಧಿಸಿದ ನಾಯರ್ ದೈವದ ಟೊಪ್ಪಿ ಚಾವಡಿಯ ಜೀರ್ಣೋದ್ಧಾರದ ಕುರಿತು ಮನವಿಪತ್ರವನ್ನು ನ.5ರಂದು ದೈವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು.

ಸೋಣಂಗೇರಿ ಹತ್ತು ಒಕ್ಕಲು ಮತ್ತು ಕುಕ್ಕನ್ನೂರು ಹದಿನಾರು ಒಕ್ಕಲಿನ ಹಿರಿಯರು ತಿಂಗಳ ಸಂಕ್ರಮಣ ಪೂಜೆ, ಶ್ರಾವಣ ಮಾಸದ ತಂಬಿಲ, ದೀಪಾವಳಿ ತಂಬಿಲ, ಹಾಗೂ ಕಾಲಾವಧಿ ಜಾತ್ರೋತ್ಸವ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಅನಾದಿಕಾಲದಿಂದಲೂ ಸುಳ್ಯದ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವದ ಸಂದರ್ಭದಲ್ಲಿ ಕುಕ್ಕನ್ನೂರು ಶ್ರೀ ಕಿನ್ನಿಮಾಣಿ ಪೂಮಾಣಿ ದೈವಗಳ ಭಂಡಾರವು ತೆರಳಿ ಧ್ವಜಾರೋಹಣಕ್ಕೆ ಅನುವು ನೀಡುವುದು ಪೂರ್ವ ಪದ್ಧತಿಯಂತೆ ನಡೆದು ಬರುತ್ತಿದ್ದು, ದೈವಗಳ ಭಂಡಾರವು ಶ್ರೀ ಚೆನ್ನಕೇಶವ ದೇವರ ಧ್ವಜಾರೋಹಣಗೈದ ಬಳಿಕ ಜಾತ್ರೋತ್ಸವವನ್ನು ಸಂಪನ್ನಗೊಳಿಸಿ, ಧ್ವಜಾವರೋಹಣ ಆದ ಬಳಿಕ ಹಿಂತಿರುಗುವುದರ ಮೂಲಕ ಶ್ರೀ ಚೆನ್ನಕೇಶವ ದೇವರ ವರ್ಷಾವಧಿ ಜಾತ್ರೋತ್ಸವವಲ್ಲಿ ಪ್ರಧಾನ ಪಾತ್ರ ವಹಿಸುತ್ತಿದೆ.

ಇದೀಗ ದೈವಸ್ಥಾನದಕ್ಕೆ ಸಂಬಂಧಿಸಿದ ನಾಯರ್ ದೈವದ ಟೊಪ್ಪಿ ಚಾವಡಿ ( ಕುದುರೆ ಕುಂಞನ ಕೊಟ್ಟಿಗೆ ಉಳ್ಳಾಕುಲು ಕುದುರೆ ಕುಂಞನಿಗೆ ದೇವಸ್ಥಾನಗಳನ್ನು ಕಟ್ಟಲು ಸ್ವಪ್ನದ ಮೂಲಕ ಆಜ್ಞೆ ಮಾಡಿದ ಸ್ಥಳ)ವು ಕುಕ್ಕನ್ನೂರಿನ ನಡುಬೆಟ್ಟು ಪರಿಸರದಲ್ಲಿದ್ದು , ಅಜೀರ್ಣಾವಸ್ಥೆಗೆ ತಲುಪಿದ್ದು, ಅಷ್ಟಮಂಗಲ ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಂತೆ ದೈವಸ್ಥಾನದ ಕುದುರೆ ಕುಂಞನ ಕೊಟ್ಟಿಗೆಯ ಜೀರ್ಣೋದ್ಧಾರ ಕಾರ್ಯವನ್ನು ದೈವಸ್ಥಾನಕ್ಕೆ ಸಂಬಂಧಿಸಿದ ಗುರುಮಾಳ್ಯ ಚಾವಡಿ, ಕಟ್ಟಮುಚ್ಚಿರು ಮಾಡ, ಪೆರಾಬೆ ಮಾಡಗಳಲ್ಲಿಯೂ ದುರಸ್ತಿ ಕಾರ್ಯಗಳನ್ನು ಮಾಡಿ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವನ್ನು 2025ರ ಮೇ ತಿಂಗಳೊಳಗೆ ನಡೆಸಲು ಸೋಣಂಗೇರಿ ಹತ್ತು ಒಕ್ಕಲು, ಕುಕ್ಕನ್ನೂರು ಹದಿನಾರು ಒಕ್ಕಲು ಹಾಗೂ ದೈವಸ್ಥಾನದ ಆಡಳಿತ ಮಂಡಳಿಯ ಸದಸ್ಯರ ವತಿಯಿಂದ ತೀರ್ಮಾನಿಸಲಾಗಿದ್ದು, ಇದರ ಖರ್ಚಿನ ಕುರಿತು ಮನವಿ ಪತ್ರವನ್ನು ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರ ಬಾಲಕೃಷ್ಣ ಗೌಡ ನಡುಬೆಟ್ಟು, ಪ್ರಧಾನ ಅರ್ಚಕ ಸುಭಾಷ್ ರೈ ಕುಕ್ಕಂದೂರು, ಹಿರಿಯರಾದ ಶೇಷಪ್ಪ ರೈ ಕುಕ್ಕಂದೂರು, ಗಂಗಾಧರ ಕುಕ್ಕನ್ನೂರು ಮಾರಡ್ಕ, ಚಿದಾನಂದ ಗೋಪಾಲಕಜೆ, ಧನಂಜಯ ಗೌಡ ಪುತ್ತೂರು, ಗಂಗಾಧರ ಗೌಡ ಹುಲಿಮನೆ, ಶಿವಪ್ರಸಾದ್ ನೀರಬಸಿರು, ಯಶವಂತ ಗೌಡ ನಡುಬೆಟ್ಟು, ವೆಂಕಟ್ರಮಣ ಖಂಡಿಗೆ, ಯೋಗೀಶ್ ಆಚಾರ್ಯ, ದೀಕ್ಷಿತ್ ನಡುಬೆಟ್ಟು, ಪ್ರವೀಣ್ ನಡುಬೆಟ್ಟು, ದಯಾನಂದ ಕಾಯರ, ಸುಧೀರ್ ರೈ ಕುಕ್ಕಂದೂರು, ಗೋಪಿನಾಥ್ ನೀರಬಸಿರು, ಪ್ರವೀಣ ನೀರಬಸಿರು, ಜಗದೀಶ್ ಹುಲಿಮನೆ ಸೇರಿದಂತೆ ಸೋಣಂಗೇರಿ ಹತ್ತು ಒಕ್ಕಲು, ಕುಕ್ಕನ್ನೂರು ಹದಿನಾರು ಒಕ್ಕಲಿನ ಹಿರಿಯರು, ಆಡಳಿತ ಮಂಡಳಿಯ ಸದಸ್ಯರುಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.