ಬೆಳ್ಳಾರೆ ಪೇಟೆಯಲ್ಲಿ ರಸ್ತೆ ಡಾಮರೀಕರಣ ಕೆಲಸ ನಡೆಯಲಿದ್ದು ರಸ್ತೆ ಅಗೆಯುವ ಕೆಲಸ ಪ್ರಾರಂಭಗೊಂಡಿದೆ.
ಮೇಲಿನಪೇಟೆಯ ಸಿಂಡಿಕೇಟ್ ಬ್ಯಾಂಕಿನ ಹತ್ತಿರ ರಸ್ತೆ ಎತ್ತರಿಸುವ ಕೆಲಸ ನಡೆಯಲಿದ್ದು ಇಲ್ಲಿ ಜೆಸಿಬಿ ಮೂಲಕ ರಸ್ತೆ ಅಗೆಯುವ ಕೆಲಸ ನಡೆಯುತ್ತಿದೆ.
ಇಲ್ಲಿ ಹಲವು ವರ್ಷಗಳಿಂದ ಮಳೆ ಬಂದಾಗ ಪ್ರತೀ ಬಾರಿಯು ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿತ್ತು.
ಈ ಬಗ್ಗೆ ಹಲವು ಬಾರಿ ಪತ್ರಿಕೆಗಳಲ್ಲಿ ವರದಿಯೂ ಪ್ರಸಾರವಾಗಿತ್ತು.
ಈಗ ಸುಮಾರು 2 ಕೋಟಿ ರೂ ಅನುದಾನದಲ್ಲಿ ರಸ್ತೆ ಕೆಲಸ ಪ್ರಾರಂಭಗೊಂಡಿದೆ.
ಮಾಸ್ತಿಕಟ್ಟೆಯಿಂದ ಕೆಳಗಿನ ಪೇಟೆಯವರೆಗೆ ಡಾಮರೀಕರಣ ಮತ್ತು ಸಿಂಡಿಕೇಟ್ ಬ್ಯಾಂಕಿನ ಹತ್ತಿರ ರಸ್ತೆ ಎತ್ತರಿಸಿ ಡಾಮರೀಕರಣ ಹಾಗೂ ಡ್ರೈನೇಜ್ ವ್ಯವಸ್ಥೆ ಸರಿ ಮಾಡುವುದಾಗಿ ಪಿಡಬ್ಲ್ಯು ಇಲಾಖೆಯವರು ತಿಳಿಸಿದ್ದಾರೆ.