ವಿಶ್ವ ಬಂಟರ ಸಮ್ಮೇಳನ : ಸುಳ್ಯ‌ ಬಂಟರ ಸಂಘ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗಿ

0

ಉಡುಪಿಯಲ್ಲಿ ಜರಗಿದ ವಿಶ್ವ ಬಂಟರ ಸಮ್ಮೇಳನದಲ್ಲಿ ನಡೆದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಉತ್ತಮ ನೃತ್ಯ ಪ್ರದರ್ಶನ ನೀಡಿದ ಸುಳ್ಯ ಬಂಟರ ಸಂಘದ ಸದಸ್ಯರಿಗೆ ಜಾಗತಿಕ ಬಂಟರ ಸಂಘದ ಅಧ್ಯಕ್ಷರಾದ ಐಕಳ ಹರೀಶ ಶೆಟ್ಟಿಯವರು ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಸುಳ್ಯ ಬಂಟರ ಸಂಘದ ಅಧ್ಯಕ್ಷರಾದ ಜಯಪ್ರಕಾಶ ರೈ,ಮಹಿಳಾ ಘಟಕದ ಅಧ್ಯಕ್ಷರಾದ ಇಂದಿರಾ ಆರ್ ರೈ, ಶಶಿಧರ ಶೆಟ್ಟಿ ಪಡ್ಪು, ಕಾರ್ಯದರ್ಶಿಗಳಾದ ಚಂದ್ರಾಕ್ಷಿ ಜೆ ರೈ , ಸುನಂದ ಶೆಟ್ಟಿ, ತಂಡದ ವ್ಯವಸ್ಥಾಪಕರಾದ ಸುಜಿತ್ ರೈ ಪಟ್ಟೆ ಉಪಸ್ಥಿತರಿದ್ದರು. ಈ ನೃತ್ಯಕ್ಕೆ ತರಬೇತಿಯನ್ನು ಜೀವನ್ ಬೆಳ್ಳಾರೆಯವರು ನೀಡಿದ್ದರು.