ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಡಗು ಜಿಲ್ಲೆ, ಸರ್ಕಾರಿ ಪ್ರೌಡ ಶಾಲೆ ಚೆಂಬು ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚೆಂಬು ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ “ಸಾಂಸ್ಕೃತಿಕ ಸೌರಭ” ಕಾರ್ಯಕ್ರಮವು.ನ.7ರಂದು ಚೆಂಬು ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು.
ರಾಜ್ಯದ ಹೆಸರಾಂತ ಕಲಾ ತಂಡಗಳು ಭಾಗವಹಿಸಿ,ಡೊಳ್ಳು ಕುಣಿತ, ಕಂಸಾಳೆ,ಭಾವಗೀತೆ,
ಜಾನಪದ ಗೀತೆ,ಹರಿಕತೆ, ಹಳೆಯ ಕನ್ನಡ ಚಿತ್ರಗೀತೆಗಳು ಪ್ರೇಕ್ಷಕರ ಮನ ರಂಜಿಸಿದವು.ಸ್ಥಳೀಯ ಪ್ರೌಡ ಮತ್ತು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ಕಂಸಾಳೆ,ಜಾನಪದ ನೃತ್ಯ,ಜಾನಪದ ಗೀತೆ ಭಕ್ತಿಗೀತೆ ,ಕುಣಿತ ಭಜನೆಗಳು ಜನಮನ ಸೂರೆಗೊಂಡಿತು.
ಕಾರ್ಯಕ್ರಮದಲ್ಲಿ ಶಾಲಾ ಎಸ್.ಡಿ. ಎಂ.ಸಿ. ಅಧ್ಯಕ್ಷ ರಮೇಶ್ ನಂಬಿಯಾರ್ ಅವರು ಅಧ್ಯಕ್ಷತೆ ವಹಿಸಿದ್ದು ,ಉದ್ಘಾಟನೆಯನ್ನು ಚಂದ್ರಶೇಖರ್ ಹೊಸೂರು ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಸಂಪಾಜೆ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಶಿಕ್ಷಕ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಣಜೂರು ಮಂಜುನಾಥ್, ಹೊಸೂರು ಗೋಪಾಲಕೃಷ್ಣ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಯಮುನಾ, ಚೆಂಬು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಜಯಂತಿ ಉಪಸ್ಥಿತರಿದ್ದರು.
ಸಹ ಶಿಕ್ಷಕಿ ಕಾಮಾಕ್ಷಿ ಪಿ.ಎಸ್.ಸ್ವಾಗತಿಸಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಣಜೂರು ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಹ ಶಿಕ್ಷಕಿ ಸರಿತಾ ವಂದಿಸಿದರು.
ಸಹಶಿಕ್ಷಕರಾದ ರಂಜಿತ್ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಪ್ರೌಡ ಶಾಲಾ ಶಿಕ್ಷಕರು, ಪ್ರಾಥಮಿಕ ಶಾಲಾ ಶಿಕ್ಷಕರು,ಎಸ್.ಡಿ.ಎಂ.ಸಿ.
ಸದಸ್ಯರು,ವಿಧ್ಯಾರ್ಥಿಗಳು,ಪೋಷಕರು,ಸಾರ್ವಜನಿಕರು ಮತ್ತು ಬೋಧಕೇತರ ಸಿಬ್ಬಂದಿಗಳು,ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.