ಸುಳ್ಯ ನ.ಪಂ.ಮಾಜಿ ಅಧ್ಯಕ್ಷರು ಸೂಡ ಸಮಸ್ಯೆ ಕುರಿತು ಎಂ.ಎಲ್.ಸಿ. ಕೋಟ ರವರೊಡನೆ ಮನವಿ ಮಾಡಿರುವುದು ಹಾಸ್ಯಾಸ್ಪದ : ರಿಯಾಜ್

0

ನಗರ ಪಂಚಾಯತ್ ಮಾಜಿ ಅಧ್ಯಕ್ಷರು, ಎಂ.ಎಲ್.ಸಿ. ಕೋಟ ಶ್ರೀನಿವಾಸ್ ಪೂಜಾರಿ ಯವರ ಜೊತೆ ಸೂಡ ಸಮಸ್ಯೆ ಸರಿಪಡಿಸುವಂತೆ ಮಾಡಿರುವ ಮನವಿ ಹಾಸ್ಯಾಸ್ಪದ ” ಎಂದು ನ.ಪಂ.ಸದಸ್ಯ ರಿಯಾಜ್ ಕಟ್ಟೆಕಾರ್ ತಿಳಿಸಿದ್ದಾರೆ.


ಇಲ್ಲ ಸೂಡ ಸಮಸ್ಯೆ ಹಲವಾರು ವರ್ಷಗಳಿಂದ ಇದೆ. ನಗರ ವ್ಯಾಪ್ತಿಯಲ್ಲಿ ಆರ್ ಟಿ ಸಿ ಬದಲಾಗಿ ಸೂಡ ನಿಯಮದಂತೆ ಫಾರಂ 3 ಖಾತೆ ನೀಡುವುದು. ಸುಳ್ಯ ನಗರ ಪಂಚಾಯತ್ ಹೊರತು ಪಡಿಸಿ ಉಳಿದೆಲ್ಲ ನಗರ ವ್ಯಾಪ್ತಿಯಲ್ಲಿ, ಸೂಡ ನಿಯಮದಲ್ಲಿ ಸಡಿಲಿಕೆ ಇದ್ದು ಅದರ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡದೆ ಪಂಚಾಯತ್ ನಿಂದ ಕೇಂದ್ರದ ವರೆಗೆ ತಮ್ಮದೇ ಪಕ್ಷ ಆಡಳಿತ ದಲ್ಲಿದ್ದರೂ , ಸುಳ್ಯಕ್ಕೆ ಸಚಿವ ಸ್ಥಾನ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಬಂದ ಸಂದರ್ಭ ಸೂಡ ನಿಯಮ ದಲ್ಲಿ ಸಡಿಲಿಕೆ ಮಾಡಲು ಪ್ರಯತ್ನ ಮಾಡದೆ ಈಗ ಹೇಳುತ್ತಿರುವುದು ಖೇದಕರ ಎಂದವರು ತಿಳಿಸಿದ್ದಾರೆ.

ಹಲವಾರು ಬಡ ಜನತೆ ಇನ್ನೂ ಸಹ ತಮ್ಮ ತಮ್ಮ ಅಸ್ತಿಗಳ ಮೇಲೆ ಸಾಲ ಪಡೆಯಲಾಗದೆ, ನಿಸ್ಸಾಯಕ ಸ್ಥಿತಿಯಲ್ಲಿರುವುದು ಕಳೆದ 5-6 ವರ್ಷಗಳಿಂದ ನಗರ ಪಂಚಾಯತ್ ಅಧ್ಯಕ್ಷರ ಗಮನಕ್ಕೆ ಬಾರದೆ ಇರುವುದು ವಿಪರ್ಯಾಸ ಅಲ್ಲವೇ? ಯಾವುದೇ ಸರಕಾರ ಅಥವಾ ಜನಪ್ರತಿನಿಧಿಗಳು ಇರಲಿ, ಇನ್ನಾದರೂ ಆದಷ್ಟು ಶೀಘ್ರ ಈ ಸಮಸ್ಯೆಗೆ ಮುಕ್ತಿ ಸಿಗಲಿ. ಎಲ್ಲರೂ ಸೇರಿ ಪಕ್ಷ ಭೇದ ಮರೆತು ಸುಳ್ಯದ ಅಭಿವೃದ್ಧಿ ಯಲ್ಲಿ ಕೈ ಜೋಡಿಸೋಣ, ಸಮಸ್ಯೆ ಗಳ ಪರಿಹಾರಕ್ಕೆ ಪ್ರಯತ್ನಿಸೋಣ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.