ಕಲ್ಲುಗುಂಡಿ ಪೊಲೀಸ್ ಹೊರ ಠಾಣೆಯಲ್ಲಿ ಪ್ರಕರಣ ದಾಖಲು
ಕಲ್ಲುಗುಂಡಿಯ ಕೂಲಿಶೆಡ್ ಬಳಿಯಿರುವ ಮನೆಯೊಂದರಿಂದ ಮನೆಯವರು ಇಲ್ಲದ ವೇಳೆ ನಗದು ಮತ್ತು ಚಿನ್ನ ಕಳವಾದ ಘಟನೆ ನ.15ರಂದು ಸಂಭವಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಕಲ್ಲುಗುಂಡಿ ಪೊಲೀಸ್ ಹೊರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೂಲಿಶೆಡ್ ನ ಬಿ.ಎಸ್. ಹನೀಫ್ ಅವರ ಕುಟುಂಬ ಬೆಳಿಗ್ಗೆ ಮನೆಗೆ ಬೀಗ ಹಾಕಿ ಆಸ್ಪತ್ರೆಗೆಂದು ತೆರಳಿ, ಸಂಜೆ ಮನೆಗೆ ಹಿಂತಿರುಗಿದಾಗ ಮನೆಯಲ್ಲಿ ಕಳವಾಗಿರುವುದು ತಿಳಿದುಬದಿದೆ.
ಅವರ ಮಕ್ಕಳು ಹಣ ಶೇಕರಿಸಿಟ್ಟಿದ್ದ ಹಣದ ಹುಂಡಿ, ಕಾಣದೇ ಇದ್ದಾಗ ನಂತರ ಮನೆಯ ಕಪಾಟು ಪರಿಶೀಲಿಸುವಾಗ ಚಿನ್ನಾಭರಣ, ಹಾಗೂ ಹನ್ನೊಂದು ಸಾವಿರ ನಗದು ಕಳವಾಗಿರುವುದು ತಿಳಿದುಬಂದಿದೆ.
ಸ್ಥಳಕ್ಕೆ ಕಲ್ಲುಗುಂಡಿ ಪೋಲಿಸರು ತೆರಳಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿದುಬಂದಿದೆ.