ಸುಳ್ಯ ಅಮರ ಸಂಘಟನಾ ಸಮಿತಿ ಆಶ್ರಯದಲ್ಲಿ ಆಧಾರ್ ನೊಂದಾಣಿ ಮತ್ತು ತಿದ್ದುಪಡಿ ಶಿಬಿರ

0

ಸುಳ್ಯ ಅಮರ ಸಂಘಟನಾ ಸಮಿತಿ ಆಶ್ರಯದಲ್ಲಿ ಭಾರತೀಯ ಅಂಚೆ ಇಲಾಖೆ ಮತ್ತು ಅಮರಮುಡ್ನೂರು ಗ್ರಾಮ ಪಂಚಾಯತ್ ಸಹಕಾರದೊಂದಿಗೆ ಆಧಾರ್ ನೊಂದಾಣಿ ಮತ್ತು ತಿದ್ದುಪಡಿ ಶಿಬಿರ ನ. 11ರಂದು ಅಮರಮುಡ್ನೂರು ಪಂಚಾಯತ್ ಸಭಾಭವನ ಕುಕ್ಕುಜಡ್ಕದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮರ ಸಂಘಟನಾ ಸಮಿತಿ ಸುಳ್ಯ ಇದರ ಅಧ್ಯಕ್ಷರಾದ ಪ್ರವೀಣ್ ಕುಲಾಲ್ ವಹಿಸಿದರು. ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಶಕಿ ಕು| ಭಾಗೀರಥಿ ಮುರುಳ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಾನಕಿ ಕಂದಡ್ಕ, ಉಪಧ್ಯಾಕ್ಷರಾದ ಭುವನೇಶ್ವರಿ, ಸದಸ್ಯರುಗಳಾದ ವೆಂಕಟ್ರಮಣ ಇಟ್ಟಿಗುಂಡಿ, ರಾಧಕೃಷ್ಣ ಕೋರತ್ಯಡ್ಕ, ಕೃಷ್ಣಪ್ರಸಾದ್ ಮಾಡಬಾಕೀಲು, ಜನಾರ್ಧನ ಪೈಲೂರು, ದಿವ್ಯ ಮಡಪ್ಪಾಡಿ, ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕೇಶವ ಕರ್ಮಜೆ, ಸಂಘದ ಮಾಜಿ ಅಧ್ಯಕ್ಷರಾದ ಹರಿಶ್ಚಂದ್ರ ಗೌಡ ಮೋಂಟಡ್ಕ, ಮಾಜಿ ನಿರ್ದೇಶಕರಾದ ಕೃಷ್ಣಪ್ಪ ಗೌಡ ಕೊಡ್ತುಗುಳಿ, ಅರಂತೋಡು ಆಧಾರ್ ಕೇಂದ್ರದ ನೀಶಾ, ನೆಟ್ಟಣ ಆಧಾರ್ ಕೇಂದ್ರದ ಶೃುತಿ ಉಪಸ್ಥಿತರಿದ್ದರು. ನೂರ ಇಪ್ಪತ್ತಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು ಭಾಗವಹಿಸಿ ಪ್ರಯೋಜನ ಪಡೆದರು.

ಅಮರ ಸಂಘಟನಾ ಸಮಿತಿ ಸುಳ್ಯ ಇದರ ಸ್ಥಾಪಕಧ್ಯಕ್ಷ ಪ್ರದೀಪ್ ಬೊಳ್ಳೂರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಯಶಸ್ವಿಗೆ ಅಮರ ಸಂಘಟನಾ ಸಮಿತಿಯ ಸದಸ್ಯರು ಸಹಕರಿಸಿದರು.