ಚಾರುವಸಂತ ನಾಟಕಕ್ಕೆ ಕಿಕ್ಕಿರಿದ ಜನಸ್ತೋಮ
ಚಾಲನೆ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಇ.ಇ. ರಮೇಶ್
ಮನೆಯನ್ನೇ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮೀಸಲಿಟ್ಟ, ಸಮಯಪಾಲನೆ ಮತ್ತು ಗುಣಮಟ್ಟದ ಕಾರ್ಯಕ್ರಮಕ್ಕೆ ಹೆಸರಾದ ರಾಜ್ಯದ ಅಪರೂಪದ ಕಲಾ ಕೇಂದ್ರ ಈ ರಂಗಮನೆ’ ಎಂದು ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಇ.ಇ.ರಮೇಶ್ ಹೇಳಿದರು.
ಅವರು ಸುಳ್ಯ ರಂಗಮನೆಯಲ್ಲಿ ನಡೆದ ಡಾ.ಹಂಪನಾ ವಿರಚಿತ ದೇಸೀ ಕಾವ್ಯದ ರಂಗರೂಪ ಚಾರುವಸಂತ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ವೇದಿಕೆಯಲ್ಲಿ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಉಪನ್ಯಾಸಕ ಡಾ.ಪೂವಪ್ಪ ಕಣಿಯೂರು ಅರೆಭಾಷೆ ಅಕಾಡೆಮಿ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, ಉದ್ಯಮಿ ಭಾಮಿ ಸುಧಾಕರ ಶೆಣೈ ಬಂಟ್ವಾಳ,ರಂಗಕರ್ಮಿ ಎಂ.ಎಸ್.ಜಯಪ್ರಕಾಶ್, ನಿವೃತ್ತ ದೈಹಿಕ ಶಿಕ್ಷಕ ತುಕಾರಾಮ ಏನೆಕಲ್ಲು, ನ್ಯಾಯವಾದಿ ಕೃಷ್ಣಮೂರ್ತಿ ಕೆ., ದಂತವೈದ್ಯೆ ಡಾ.ವಿದ್ಯಾಶಾರದ ಉಪಸ್ಥಿತರಿದ್ದರು.
ರಂಗಮನೆ ಅಧ್ಯಕ್ಷ ಡಾ. ಜೀವನ್ ರಾಂ ಸುಳ್ಯ ಎಲ್ಲರನ್ನೂ ಸ್ವಾಗತಿಸಿದರು.
ಬಳಿಕ ಡಾ.ನಾ.ದಾ.ಶೆಟ್ಟಿ ರಂಗರೂಪಕ್ಕಿಳಿಸಿದ,ಜೀವನ್ ರಾಂ ಸುಳ್ಯ ನಿರ್ದೇಶನದಲ್ಲಿ ಮೂಡುಬಿದ್ರೆಯ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಕಲಾವಿದರಿಂದ ಚಾರುವಸಂತ ನಾಟಕ ಪ್ರದರ್ಶನ ತುಂಬಿದ ಪ್ರೇಕ್ಷಾಂಗಣದೆದುರು ನಡೆಯಿತು.