ಬೆಳ್ಳಾರೆ : ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕಿದ ಪ್ರಕರಣ

0

ಗ್ರಾ.ಪಂ.ನಿಂದ ರೂ.5 ಸಾವಿರ ದಂಡ ವಸೂಲಿ

ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕಿದ ವ್ಯಕ್ತಿಯೊಬ್ಬರಿಗೆ ಬೆಳ್ಳಾರೆ ಗ್ರಾಮ ಪಂಚಾಯತ್ ಆಡಳಿತವು ರೂ.5 ಸಾವಿರ ದಂಡ ವಿಧಿಸಿದ ಘಟನೆ ವರದಿಯಾಗಿದೆ.
ಬೆಳ್ಳಾರೆಯ ಫ್ಲಾಟ್ ಒಂದರಲ್ಲಿ ವಾಸಿಸುವ ವ್ಯಕ್ತಿಯೊಬ್ಬರು ಗೌರಿಹೊಳೆ ಸಮೀಪ ರಸ್ತೆಬದಿಯಲ್ಲಿ ಕಸದ ರಾಶಿ ತಂದು ಬಿಸಾಡಿದ್ದರು. ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಪಂಚಾಯತ್ ನವರು ಹೋಗಿ ಪರಿಶೀಲಿಸಿದಾಗ ಆ ಕಸದಲ್ಲಿ ಪಾರ್ಸೆಲ್ ಬಂದ ವಿಳಾಸ ದೊರೆಯಿತು. ಅದರಲ್ಲಿದ್ದ ನಂಬರಿಗೆ ಕರೆ ಮಾಡಿದಾಗ ಉದಯ ನಾಯಕ್ ಎಂಬವರು ಕಸ ತಂದು ಬಿಸುಡಿರುವುದಾಗಿ ಖಚಿತಪಟ್ಟಿತೆಂದು ತಿಳಿದುಬಂದಿದೆ.


ಕಟ್ಟುನಿಟ್ಟಿನ ಕ್ರಮ ಕೈಗೊಂಡ ಪಂಚಾಯತ್ ನವರು ಸಾರ್ವಜನಿಕ ಸ್ಥಳದಲ್ಲಿ ಕಸ ಬಿಸಾಡಿದ ಉದಯರಿಗೆ 5 ಸಾವಿರ ರೂ. ದಂಡ ವಿಧಿಸಿದರಲ್ಲದೆ, ಕಸ ಹಾಕಿದ ವ್ಯಕ್ತಿಯೇ ಅದನ್ನು ಅಲ್ಲಿಂದ ತೆಗೆಸುವಂತೆ ವ್ಯವಸ್ಥೆ ಮಾಡಿದರೆಂದು ತಿಳಿದುಬಂದಿದೆ.