ಶ್ರೀ ಗುರು ರಾಘವೇಂದ್ರ ಸ್ವಾಮಿ ಭಜನಾ ಮಂದಿರ ಜಾಲ್ಸೂರು ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಜಾಲ್ಸೂರು ವತಿಯಿಂದ

0

ದಿ| ಬಾಬು ಪಾಟಾಳಿಯವರಿಗೆ ಶ್ರದ್ಧಾಂಜಲಿ-ವೈಕುಂಠ ಸಮಾರಾಧನೆ

ಪ್ರಾಮಾಣಿಕ ಚಾಲಕ, ಮಂದಿರದ ಕೆಲಸದಲ್ಲಿ ಶಕ್ತಿಯಾಗಿದ್ದ ಬಾಬಣ್ಣ

ಶ್ರೀ ಗುರು ರಾಘವೇಂದ್ರ ಸ್ವಾಮಿ ಭಜನಾ ಮಂದಿರ ಜಾಲ್ಸೂರು ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಜಾಲ್ಸೂರು ಇದರ ವತಿಯಿಂದ ಅಪಘಾತದಲ್ಲಿ ಮೃತರಾದ ಹಿರಿಯ ರಿಕ್ಷಾ ಚಾಲಕ ಹಾಗೂ ಭಜನಾ ಮಂದಿರದ ಅಧ್ಯಕ್ಷರಾದ ಜಾಲ್ಸೂರಿನ ಎಸ್.ಬಾಬು ಪಾಟಾಳಿ ಅರಿಯಡ್ಕ ಅವರಿಗೆ ಶ್ರದ್ಧಾಂಜಲಿ ಸಭೆ ಮತ್ತು ವೈಕುಂಠ ಸಮಾರಾಧನೆಯು ನ.೧೬ರಂದು ಭಜನಾ ಮಂದರಿದ ಸಭಾಭವನದಲ್ಲಿ ನಡೆಯಿತು.


ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಜಯರಾಮ ರೈ ಜಾಲ್ಸೂರು ರವರು ಮಾತನಾಡಿ ಜಾಲ್ಸೂರು ಮಂದಿರದಲ್ಲಿ ನಡೆಯುವ ಎಲ್ಲ ಉತ್ಸವಗಳಲ್ಲಿ ತೊಡಗಿಸಿಕೊಂಡಿದ್ದ ಬಾಬಣ್ಣ ಭಜನಾ ಮಂದಿರದ ಶಕ್ತಿಯಾಗಿದ್ದರು. ಅವರ ಅಗಲಿಕೆ ಸಮಾಜಕ್ಕೆ ನಷ್ಟ. ಅವರು ಮಂದಿರದಲ್ಲಿ ಮಾಡಿದ ಕೆಲಸದ ಹೆಜ್ಜೆಗಳೇ ನಮಗೆ ದಾರಿದೀಪ. ಭಜನಾ ಮಂದಿರದ ಆರಂಭದ ಕಾಲದಿಂದಲೇ ಇಲ್ಲಿಯ ಕೆಲಸ ಕಾರ್ಯದಲ್ಲಿ ಬಾಬಣ್ಣ ತೊಡಗಿಸಿಕೊಂಡಿದ್ದರು. ಅವರಿದ್ದರೆಂದರೆ ಎಲ್ಲ ಕೆಲಸಗಳು ಅಚ್ಚುಕಟ್ಟು. ಅವರ ನಡೆ ನುಡಿ, ಪ್ರಾಮಾಣಿತೆ ನಮಗೆಲ್ಲ ಆದರ್ಶವಾಗುತ್ತದೆ'' ಎಂದು ನುಡಿನಮನ ಸಲ್ಲಿಸಿದರು. ಸುಳ್ಯ ಬಿ.ಎಂ.ಎಸ್. ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ ಮಾತನಾಡಿ,ಪ್ರಾಮಾಣಿಕ ಕೆಲಸಗಾರ ಬಾಬಣ್ಣ. ಅವರು ನಮಗೆ ಮಾರ್ಗದರ್ಶಕರಾಗಿದ್ದರು” ಎಂದು ಹೇಳಿದರು.


ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಜಾಲ್ಸೂರು ಅಧ್ಯಕ್ಷರಾದ ನಿಶಾಂತ್ ಮೋಂಟಡ್ಕ ಮತ್ತು ಇತರ ಪದಾಧಿಕಾರಿಗಳು, ತಾಲೂಕು ರಿಕ್ಷಾ ಯೂನಿಯನ್ ಕಾರ್ಯದರ್ಶಿ ಚಂದ್ರಶೇಖರ, ಪುರೋಹಿತ ನಾಗರಾಜ ಭಟ್, ಮಾಧವ ಗೌಡ ಕಾಳಮನೆ, ಆತ್ಮಾನಂದ ಗಬ್ಬಲಡ್ಕ, ಧರ್ಮಪಾಲ ಕೆಮನಬಳ್ಳಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಸಭೆಯಲ್ಲಿದವರು ಒಂದು ನಿಮಿಷಗಳ ಮೌನ ಪ್ರಾರ್ಥನೆ ಸಲ್ಲಿಸಿ ಬಾಬು ಪಾಟಾಳಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಈ ಸಂದರ್ಭದಲ್ಲಿ ಮೃತರ ಪುತ್ರರಾದ ಪ್ರವೀಣ್ ಅರಿಯಡ್ಕ, ನವೀನ್ ಅರಿಯಡ್ಕ ಸಹೋದರ ರವಿ ಸುಂಕಡ್ಕ ಭಾವಚಿತ್ರದೆದುರು ದೀಪ ಬೆಳಗಿಸಿದರು. ಕುಟುಂಬಸ್ಥರು, ಊರವರು, ಬಂಧುಗಳು ಉಪಸ್ಥಿತರಿದ್ದರು.
ಕಮಲಾಕ್ಷ ನಂಗಾರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಬಾಬಣ್ಣರನ್ನು ನೆನೆದು ಕಣ್ಣೀರು


ನುಡಿನಮನ ಸಲ್ಲಿಸಿದ ಜಯರಾಮ ರೈ ಜಾಲ್ಸೂರುರವರು ಬಾಬಣ್ಣರವರ ಜೀವನ, ಸೇವೆ, ಧಾರ್ಮಿಕತೆ ಕುರಿತು ಮಾತನಾಡಿ ಅವರನ್ನು ನೆನೆದು ಕಣ್ಣಿರಾದರು. ಈ ವೇಳೆ ಸಭೆಯಲ್ಲಿದ್ದ ಎಲ್ಲರೂ ಕೂಡಾ ಕಣ್ಣೀರಾದರು.