ಸುಳ್ಯದಲ್ಲಿ ನಡೆಯುತ್ತಿರುವ ಮೂರು ದಿನದ ರಾಷ್ಟ್ರೀಯ ಕಬಡ್ಡಿ ಪಂದ್ಯಾಟ ರಾಷ್ಟ್ರೀಯ ಮಟ್ಟದ ವಿವಿಧ ತಂಡಗಳಿಂದ ಜಿದ್ದಾಜಿದ್ದಿನಿಂದ ನಡೆಯುತ್ತಿದ್ದು ಪ್ರೇಕ್ಷಕರಿಗೆ ರಸದೌತಣ ನೀಡುತ್ತಿದೆ.
ಎರಡನೆಯ ದಿನದ ಪಂದ್ಯಾಟದ ವೀಕ್ಷಣೆಗೆ ಮಾಜಿ ಸಚಿವ ಎಸ್ ಅಂಗಾರ ಭಾಗವಹಿಸಿ ಆಟಗಾರರಿಗೆ ಪ್ರೋತ್ಸಾಹ ನೀಡಿದರು. ವೇದಿಕೆಯಲ್ಲಿ ಸುಳ್ಯ ವೃತ್ತ ನಿರೀಕ್ಷಕ ಮೋಹನ್ ಕೊಠಾರಿ, ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ಈರಯ್ಯ ದೂಂತೂರು ನಗರ ಪಂಚಾಯತ್ ಮುಖ್ಯ ಅಧಿಕಾರಿ ಸುಧಾಕರ್,ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ,ಮುಖಂಡರುಗಳಾದ ಟಿ ಎಂ ಶಹೀದ್ ತೆಕ್ಕಿಲ್, ಕೆ. ಟಿ ವಿಶ್ವನಾಥ್, ಜಿ ಜಿ ನಾಯಕ್,ಎಸ್ ಸಂಶುದ್ದೀನ್ ಆರಂಬೂರು, ಮುಸ್ತಫಾ ಜನತಾ, ಪಿ ಎ ಮಹಮ್ಮದ್, ರಾಧಕೃಷ್ಣ ಬೂಡು, ಶಾಫಿ ಕುತ್ತಮೊಟ್ಟೆ ಮೊದಲಾದವರು ಉಪಸ್ಥಿತರಿದ್ದರು.
ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ಆಯೋಜನೆ ಹಾಗೂ ರಾಷ್ಟ್ರೀಯ ಅಮೆಚೂರ್ ಕಬಡ್ಡಿ ಫಡರೇಷನ್ ಮತ್ತು ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಇದರ ಸಹಭಾಗಿತ್ವದಲ್ಲಿ
ನ.17,18,19 ರಂದು ಮೂರು ದಿನಗಳು ಬಹಳ ಅದ್ದೂರಿಯ ಕಬಡ್ಡಿ ಪಂದ್ಯಾಟ ನಡೆಯುತ್ತಿದ್ದು 16 ತಂಡಗಳ ಭಾಗವಹಿಸುವಿಕೆಯಲ್ಲಿ ನಡೆಯಲಿದೆ.
ಪುರುಷರ ಮತ್ತು ಮಹಿಳೆಯರ ರಾಷ್ಟ್ರ ಮಟ್ಟದ ತಂಡಗಳು ಪಂದ್ಯಾಟದಲ್ಲಿ ಸೆಣಸಾಟ ನಡೆಸಲಿರುವುದು.