ಸುಳ್ಯದಲ್ಲಿ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟ :ಎರಡನೆಯ ದಿನದ 4ನೇ ಪಂದ್ಯದಲ್ಲಿ ಬೆಂಗಳೂರು ಅನ್ನಪೂರ್ಣೇಶ್ವರಿ ತಂಡ ಜಯ

0

ಪಂದ್ಯಾಟ ವೀಕ್ಷಿಸಲು ಗ್ಯಾಲರಿಯಲ್ಲಿ ತುಂಬಿದ ಪ್ರೇಕ್ಷಕರು

ಸುಳ್ಯದಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಮಟ್ಟದ ಎರಡನೇಯ ದಿನದ ಕಬ್ಬಡಿ ಪಂದ್ಯಾಟದ 4ನೇ ಪಂದ್ಯವು ಅನ್ನಪೂರ್ಣೇಶ್ವರಿ ಬೆಂಗಳೂರು ಫ್ರೆಂಡ್ ಕ್ಲಬ್ ಕಡಬ ತಂಡದ ನಡುವೆ ಜಿದ್ಧಾಂಜಲಿ ಜಿದ್ದಾ ಜಿದ್ದಿನಿಂದ ನಡೆಯಿತು.

ಸಮಯ ರಾತ್ರಿ ಒಂಬತ್ತು ಗಂಟೆ ಆಗುತ್ತಿದ್ದಂತೆ ಗ್ಯಾಲರಿ ತುಂಬಾ ಪ್ರೇಕ್ಷಕರು ಕಿಕ್ಕಿರಿದು ತುಂಬಿ ಆಟದ ಸ್ವಾದವನ್ನು ಪಡೆದುಕೊಂಡ.

ಎರಡು ತಂಡಗಳ ಆಟಗಾರರು ಅಂಕಗಳನ್ನು ಪಡೆಯುವ ಸಂದರ್ಭ ಚಪ್ಪಾಳೆ ತಟ್ಟಿ ಆಟಗಾರರಿಗೆ ಪ್ರೋತ್ಸಾಹಿಸುತ್ತಿದ್ದರು.

ಬೆಂಗಳೂರು ಅನ್ನಪೂರ್ಣೇಶ್ವರಿ ತಂಡದ ಆಟಗಾರರು ಮೊದಲ ದಿನದ ಆಟಕ್ಕಿಂತ ಹೆಚ್ಚು ಸ್ಪೂರ್ತಿ ತುಂಬಿ ಇಂದು ಆಟವಾಡಿದರು.ತಂಡದ ಆಟಗಾರ ಧರಣಿಧರ ಉತ್ತಮ ರೈಡ್ ಮಾಡುವ ಮೂಲಕ ಅತಿ ಹೆಚ್ಚು ಅಂಕಗಳನ್ನು ತಂಡಕ್ಕೆ ತಂದುಕೊಟ್ಟರು. ಮತ್ತೋರ್ವ ಆಟಗಾರ ಶ್ರೀಧರ್ ಉತ್ತಮ ಟಾಕಲ್ ಮಾಡುವ ಮೂಲಕ ಭರ್ಜರಿ ಪ್ರದರ್ಶನವನ್ನು ನೀಡಿದರು.

ಕಡಬದ ನೀಳಕಾಯದ ಆಟಗಾರ ರೈಡರ್ ಗೋಗ್ಗು ಏಕ ಸಮಯದಲ್ಲಿ ನಾಲ್ಕು,ಮೂರು ಸೂಪರ್ ರೈಡರ್ ಪಾಯಿಂಟ್ ತಂದು ತಂಡಕ್ಕೆ ಗೆಲುವಿನ ಆಸೆಯನ್ನು ಮೂಡಿಸಿದ್ದರು.ಇದೇ ತಂಡದ ಮತ್ತೋರ್ವ ಆಟಗಾರ ನಾಸಿರ್ ಉತ್ತಮ ಆಟವನ್ನು ಪ್ರದರ್ಶಿಸಿದರು.

ಅಂತಿಮವಾಗಿ ಬೆಂಗಳೂರು ಅನ್ನಪೂರ್ಣೇಶ್ವರಿ ತಂಡ 47-42 ಅಂಕಗಳ ಅಂತರದಿಂದ
ಫ್ರೆಂಡ್ಸ್ ಕ್ಲಬ್ ಕಡಬ ತಂಡವನ್ನು ಸೋಲಿಸಿ ಗೆಲುವು ಸಾಧಿಸಿತು.

ಆರಂಭದಿಂದಲೇ ಜಿದ್ದಾಜಿದ್ದಿನಿಂದ ಕೂಡಿದ ಪಂದ್ಯ ಕೊನೆಯ ಕ್ಷಣದವರೆಗೆ ಅಭಿಮಾನಿಗಳನ್ನು ಗೆಲುವು ಸೋಲು ಲೆಕ್ಕಾಚಾರದಲ್ಲಿ ತೊಡಗಿಸಿಕೊಂಡಿತು.

ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘ, ಹಾಗೂ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬ್ಬಡ್ಡಿ ಪಂದ್ಯಾಟ ಸಂಘಟನಾ ಸಮಿತಿ, ಆಶ್ರಯದಲ್ಲಿ ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ಮೂರು ದಿನಗಳ ಪುರುಷರ ಮತ್ತು ಮಹಿಳೆಯರ ಪ್ರೊ ಮಾದರಿಯ ಕಬಡ್ಡಿ ಪಂದ್ಯಾಟ ಸುಳ್ಯದ ಪ್ರಭು ಮೈದಾನದಲ್ಲಿ ನಡೆಯುತ್ತಿದೆ.