ಆದರ್ಶ ವಿವಿಧೋದ್ದೇಶ ಸ.ಸಂಘದ 14ನೇ ಶಾಖೆ ಬಿ.ಸಿ. ರೋಡ್ ನಲ್ಲಿ ಶುಭಾರಂಭ

0

ಪುತ್ತೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಸವಣೂರು ಕೆ. ಸೀತಾರಾಮ ರೈಯವರ ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ 14ನೇ ಬಿ.ಸಿ. ರೋಡ್ ಶಾಖೆ ನ. 20ರಂದು ಉದ್ಘಾಟನೆಗೊಂಡಿತು. ಬಂಟ್ವಾಳ‌ ಶಾಸಕ ರಾಜೇಶ್ ನಾಯ್ಕ್ ಶಾಖೆಯನ್ನು ಉದ್ಘಾಟಿಸಿದರು.

ಭದ್ರತಾ ಕೊಠಡಿಯನ್ನು ರೋಟರಿ ಜಿಲ್ಲೆ 3181ರ ಮಾಜಿ ಜಿಲ್ಲಾ ಗವರ್ನರ್ ರೊ. ಯನ್. ಪ್ರಕಾಶ್ ಕಾರಂತ್ ಉದ್ಘಾಟಿಸಿದರು. ಕಂಪ್ಯೂಟರ್ ನ್ನು ಮೊಡಂಕಾಪು ಇನ್ಫೆಂಟ್ ಜೀಸಸ್ ಚರ್ಚ್‌ನ ಧರ್ಮಗುಗಳಾದ ರೆ.ಫಾ. ವಲೇರಿಯನ್ ಎಸ್.ಡಿ’ಸೋಜ ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಚಿವ ಬಿ. ರಮಾನಾಥ ರೈ ವಹಿಸಿದ್ದರು. ಪೊಳಲಿ ಸೇವಾ ಸಹಕಾರಿ ಸಂಘದ ನಿರ್ದೇಶಕ ಅಬೂಬಕ್ಕರ್ ಅಮ್ಮುಂಜೆ ಪ್ರಥಮ ಠೇವಣಿ ಪತ್ರ ಬಿಡುಗಡೆ ಮಾಡಿದರು. ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಜಯರಾಜ ರೈ, ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷ ಎನ್. ಸುಂದರ ರೈ ಮತ್ತು ಸಂಘದ ಮಹಾಪ್ರಬಂಧಕ ವಸಂತ ಜಾಲಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಸವಣೂರು ಕೆ. ಸೀತಾರಾಮ ರೈ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಂಘದ ನಿರ್ದೇಶಕ ಜೈರಾಜ್ ಭಂಡಾರಿ ವಂದಿಸಿದರು. ಪಂಜ ಶಾಖೆಯ ವ್ಯವಸ್ಥಾಪಕರಾದ ಪರಮೇಶ್ವರ ಗೌಡ ಬಿಳಿಮಲೆ ಕಾರ್ಯಕ್ರಮ ನಿರೂಪಿಸಿದರು. ಸಂಘದ ಪ್ರಧಾನ ಕಚೇರಿ ಮತ್ತು ಎಲ್ಲಾ 14 ಶಾಖೆಗಳ ವ್ಯವಸ್ಥಾಪಕರು, ಸಿಬ್ಬಂದಿ ವರ್ಗ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸಂಘದ ನಿರ್ದೇಶಕರು, ಸದಸ್ಯರು, ಸಭೆಯಲ್ಲಿ ಉಪಸ್ಥಿತರಿದ್ದರು.

ರಾಷ್ಟ್ರೀಕೃತ ಬ್ಯಾಂಕುಗಳು ದಾಖಲೆಗಳನ್ನೇ ಆದರಿಸಿ ಸಾಲ ಸೌಲಭ್ಯಗಳನ್ನು ನೀಡಿದರೆ, ಸಹಕಾರಿ ಸಂಸ್ಥೆಗಳು ಮಾನವೀಯತೆಯನ್ನೂ ಪರಿಗಣಿಸಿ ಸಾಲ ನೀಡುತ್ತದೆ. ತಮ್ಮ ಸಂಘದ ಲಾಭಾಂಶವನ್ನು ಸರಕಾರಿ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೀಡುತ್ತಾ ಬಂದಿರುವುದು ಸೀತಾರಾಮ ರೈಯವರ ಹೆಗ್ಗಳಿಕೆ. ಸೀತಾರಾಮ ರೈಯವರ ಬೆಳವಣಿಗೆಗೆ ಇನ್ನಷ್ಟು ಶಕ್ತಿಯನ್ನು ದೇವರು ಅನುಗ್ರಹಿಸಲಿ – ರಾಜೇಶ್ ನಾಯ್ಕ್

ಸಹಕಾರಿ ಸಂಸ್ಥೆ ನಮ್ಮ ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ತರ ಕೊಡುಗೆಯನ್ನು ನೀಡಿದೆ. ಸೀತಾರಾಮ ರೈಯವರ ಆದರ್ಶ ಸಹಕಾರಿ ಸಂಘವೂ ಈ ನಿಟ್ಟಿನಲ್ಲಿ ಮಹತ್ತರ ಪಾತ್ರವಹಿಸಿದೆ. ಸೀತಾರಾಮ ರೈಯವರು ಅಗ್ರಸ್ಥಾನದಲ್ಲಿದ್ದಾರೆ. ತಾವು ಕೆಲಸ ಮಾಡಿದ ಪ್ರತಿಯೊಂದು ಸಂಸ್ಥೆಯನ್ನೂ ವಿಶೇಷವಾಗಿ ಅಭಿವೃದ್ಧಿ ಪಡಿಸಿದ ಕೀರ್ತಿ ರೈಯವರಿಗೆ ಸಲ್ಲುತ್ತದೆ. ಸುಳ್ಯ ರೋಟರಿ ಸಂಸ್ಥೆಯ ಸಂಚಾಲಕರಾಗಿ 25 ಸಾವಿರ ಸ್ಕ್ವೇರ್ ಫೀಟ್ ನ ಕಟ್ಟಡ, 22 ಲಕ್ಷ ಡೆಪಾಸಿಟ್ ಇರಿಸುವ ಕಾರ್ಯ ಮಾಡಿರುವುದು ಅವರ ಕಾರ್ಯದಕ್ಷತೆಯನ್ನು ತೋರಿಸುತ್ತದೆ – ರೊ. ಪ್ರಕಾಶ್ ಕಾರಂತ್

ಸಹಕಾರಿ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿ ಕರ್ನಾಟಕ ಸಹಕಾರ ರತ್ನ ಪ್ರಶಸ್ತಿ ಪಡೆದಿರುವ ಸೀತಾರಾಮ ರೈಯವರು ಶಿಕ್ಷಣ ಕ್ಷೇತ್ರದಲ್ಲೂ ಪ್ರಗತಿ ಸಾಧಿಸಿದ್ದಾರೆ. ಪ್ರತೀ ವರ್ಷ ಲಕ್ಷಾಂತರ ರೂಪಾಯಿ ವಿದ್ಯಾರ್ಥಿ ವೇತನ ನೀಡುತ್ತಾ ಬಂದಿದ್ದಾರೆ. ಸಂಸ್ಥೆ ಇನ್ನಷ್ಟು ಬೆಳೆದು ಸಮಾಜಕ್ಕೆ ಆದರ್ಶವಾಗಿ ಬೆಳೆಯಲಿ – ರಮಾನಾಥ ರೈ

ನಮ್ಮ ಸಂಘದ ಲಾಭಾಂಶದಲ್ಲಿ ಪ್ರತೀ ವರ್ಷ ನಮ್ಮ ಸಂಘದ ಎಲ್ಲಾ ಶಾಖೆಗಳ ವ್ಯಾಪ್ತಿಯ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಸುಮಾರು 200 ವಿದ್ಯಾರ್ಥಿಗಳಿಗೆ 4 ಲಕ್ಷದಂತೆ ಇದುವರೆ ಸುಮಾರು 25 ಲಕ್ಷ ವಿದ್ಯಾರ್ಥಿ ವೇತನ ನೀಡುತ್ತಾ ಬಂದಿದ್ದೇವೆ. ಸಹಕಾರಿ ಕ್ಷೇತ್ರದಲ್ಲಿ ಸುಮಾರು 55 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ನಮ್ಮ ಸಂಘದಿಂದ 50 ಲಕ್ಷದ ವರೆಗೆ ಕೇವಲ ಎರಡೇ ದಿವಸಗಳಲ್ಲಿ ಸಾಲ ನೀಡುತ್ತೇವೆ. ಜ್ಯುವೆಲ್, ವಾಹನ, ಆಸ್ತಿ, ಕೃಷಿ ಹೀಗೆ ಎಲ್ಲಾ ರೀತಿಯ ಸಾಲಗಳನ್ನು ನೀಡುತ್ತೇವೆ – ಕೆ. ಸೀತಾರಾಮ ರೈ