ಎಣ್ಣೆ ಮಜಲು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

0

ನ. 17 ರಂದು ಎಣ್ಣೆ ಮಜಲು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ನಡೆಸಲಾಯಿತು.

ಅಧ್ಯಕ್ಷರಾಗಿ ಅಂಗನವಾಡಿ ಪುಟಾಣಿ ಕು.ದಿತಿ ಕೊರಪ್ಪಣೆ ವಹಿಸಿದ್ದರು ಉದ್ಘಾಟನೆ ಯನ್ನು ಕು ಹಂಸಿಕ ಕೊರಪ್ಪಣೆ ದೀಪ ಬೆಳಗಿಸಿ ಉದ್ಘಾಟಿಸಿದರು ಅಂಗನವಾಡಿ ಪುಟಾಣಿಗಳು ಪ್ರಾರ್ಥನೆ ಮಾಡಿದರು.

ವೇದಿಕೆಯಲ್ಲಿ ಬಾಲವಿಕಾಸ ಸಮಿತಿ ಅಧ್ಯಕ್ಷೆಯಾದ ಶ್ರೀಮತಿ ಪುಷ್ಪಾವತಿ ಕೊರಪ್ಪಣೆ .ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಯ ಅತಿಥಿ ಶಿಕ್ಷಕಿ ಶ್ರೀಮತಿ ಕಾವ್ಯ ಉಪಸ್ಥಿತರಿದ್ದರು

ಮಕ್ಕಳಿಗೆ ಆಟೋಟ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು.

ಈ ಬಹುಮಾನದ ಪ್ರಾಯೋಜಕರಾದ ಶ್ರೀಮತಿ ಸುಮಿತ್ರಾ ಬುಡೆಂಗಿ ಮಾಜಿ ಗ್ರಾಮ ಪಂಚಾಯತ್ ಸದಸ್ಯೆ ಕೊಡುಗೆ ಯಾಗಿ ನೀಡಿದರು ಈ ಸಂದರ್ಭದಲ್ಲಿ ಮಕ್ಕಳ ಪೋಷಕರು ಸ್ತ್ರೀಶಕ್ತಿ ಸದಸ್ಯರುಗಳು ಅಂಗನವಾಡಿ ಸಹಾಯಕಿ ಶ್ರೀಮತಿ ವಸಂತಿ ಉಪಸ್ಥಿತರಿದ್ದರು.

ಆಶಾ ಕಾರ್ಯಕರ್ತೆ ಶ್ರೀಮತಿ ರಾಧಾ ಕೆ ಎಮ್ ಸ್ವಾಗತಿಸಿದರು ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಹರಿಣಾಕ್ಷಿ ವಂದಿಸಿದರು.