ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ನಲ್ಲಿ 2022-23 ನೇ ಸಾಲಿನ ಜಮಾಬಂಧಿಯು ನ.21 ರಂದು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಸುಳ್ಯ ಬಿ.ಐ.ಇ.ಆರ್.ಟಿ ಬಿ.ಆರ್.ಸಿಯ ದೇವರಾಜ್ ಮುತ್ಲಾಜೆ ನೋಡೆಲ್ ಅಧಿಕಾರಿಯಾಗಿ ಲೆಕ್ಕಪತ್ರ ಮಂಡಿಸಿದರು.
ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿಚಂದ್ರ, ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಸೂಂತೋಡು, ಉಪಾಧ್ಯಕ್ಷೆ ಶ್ರೀಮತಿ ಚಿತ್ರಕುಮಾರಿ, ಸದಸ್ಯರಾದ ಪ್ರಶಾಂತ್ ಪಾನತ್ತಿಲ, ಶ್ರೀಮತಿ ಭವಾನಿ ಮೂರ್ಜೆ ಹಾಗೂ ಸಿಬ್ಬಂದಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.