ಬೆಳ್ಳಾರೆ ಕೋಲ್ಡ್ ಹೌಸ್ ಉದ್ಯೋಗಿ ವೆಂಕಪ್ಪ ಗೌಡ ನಿಧನ

0

ಬೆಳ್ಳಾರೆಯ ಕೋಲ್ಡ್ ಹೌಸ್ ನಲ್ಲಿ ಉದ್ಯೋಗಿಯಾಗಿದ್ದ ವೆಂಕಪ್ಪ ಗೌಡ ಎಂಬವರು ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನ.24 ರಂದು ನಿಧನರಾದರು.
ಅವರಿಗೆ 46 ವರ್ಷ ಪ್ರಾಯವಾಗಿತ್ತು.
ಲಿವರ್ ಸಮಸ್ಯೆಯಿಂದ 12 ದಿನಗಳ ಹಿಂದೆ ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ದಾಖಲಾಗಿದ್ದ ಇವರು ಚಿಕಿತ್ಸೆ ಫಲಿಸದೆ ನಿಧನರಾದರು.
ಪುತ್ತೂರು ತಾಲೂಕಿನ ಕೋಡಿಂಬಾಡಿ ಮನೆಯವರಾದ ಇವರು ಕಳೆದ 28 ವರ್ಷಗಳಿಂದ ಬೆಳ್ಳಾರೆ ಶೆಣೈ ಕೋಲ್ಡ್ ಹೌಸ್ ನಲ್ಲಿ ಉದ್ಯೋಗಿಯಾಗಿದ್ದರು.
ಕೋಲ್ಡ್ ಹೌಸ್ ಪ್ರಾರಂಭದ ದಿನದಿಂದಲೇ ಅಲ್ಲಿ ಕೆಲಸ ಮಾಡಿಕೊಂಡಿದ್ದ ಇವರು ಬೆಳ್ಳಾರೆಯಲ್ಲಿ ಎಲ್ಲರಿಗೂ ಚಿರಪರಿಚಿತರಾಗಿದ್ದರು.
ಮೃತರು ಸಹೋದರರು,ಹಾಗೂ ಸಹೋದರಿ,ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.