ಪೆರಾಜೆ ಅಲ್ ಅಮೀನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಮ್ರಾ ಯಾತ್ರೆಗೆ ಬೀಳ್ಕೊಡುಗೆ

0


ಮುಹಿಯ್ಯದ್ದೀನ್ ಜುಮಾ ಮಸೀದಿ ಪೆರಾಜೆ ಇದರ ಮಾಜಿ ಅಧ್ಯಕ್ಷರು ಮತ್ತು ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಅಬೂಬಕ್ಕರ್ ಪಿ.ಎನ್. ರವರು ಉಮ್ರಾ ಯಾತ್ರೆ ನಿರ್ವಹಿಸಲು ಪವಿತ್ರ ಮಕ್ಕಾ ಮದೀನ ಕ್ಕೆ ತೆರಳುತ್ತಿದ್ದಾರೆ. ಇವರಿಗೆ ಅಲ್ ಅಮೀನ್ ಚಾರಿಟೇಬಲ್ ಟ್ರಸ್ಟ್ ಮತ್ತು ಊರಿನ ಎಲ್ಲಾ ನಾಗರಿಕರ ಪರವಾಗಿ ಬೀಳ್ಕೊಡುಗೆ ಸಮಾರಂಭವು ಕನ್ನಡ ಪೆರಾಜೆಯಲ್ಲಿ ನಡೆಯಿತು. ಈ ಸಂಧರ್ಭದಲ್ಲಿ ಅಲ್ ಅಮೀನ್ ಅಧ್ಯಕ್ಷರಾದ ಉನೈಸ್ ಪೆರಾಜೆ. ಶಿಹಾಬ್ ಪೆರಾಜೆ. ಅಶ್ರಪ್ ಸ್ಟೀಲ್,ಲತೀಪ್ ಪಿ.ಎ, ಉಝೈಪ ,ಅಝರುದ್ದೀನ್,ಬಶೀರ್,ಅಬ್ದುಲ್ಲಾ, ಮಹಮ್ಮದ್ ಬಿಳಿಯಾರ್, ಅಶ್ರಪ್ ಕಾಸ್ಪಾಡಿ,ಮನ್ಸೂರ್,ರಶೀದ್,ನಾಸಿರ್, ಮೆಹದಿ, ಇಬ್ರಾಹಿಂ ಮತ್ತು ಹಲವರು ಉಪಸ್ಥಿತರಿದ್ದರು.