ಮಂಡೆಕೋಲು ಸೊಸೈಟಿಯಿಂದ‌ ಮರಣ ಸಾಂತ್ವನ ‌ನಿಧಿ ವಿತರಣೆ

0

ಮಂಡೆಕೋಲು ಸಹಕಾರಿ ಸಂಘದ ಸದಸ್ಯರಾಗಿದ್ದು, ಇತ್ತೀಚೆಗೆ ನಿಧನರಾದ ದೇವರಗುಂಡ ಶ್ರೀಮತಿ ಸುಮಾವತಿ ಅವರ ಮನೆಯವರಿಗೆ ನ.24ರಂದು ಮರಣ ಸಾಂತ್ವನ ನಿಧಿಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಜಲಜಾ ದೇವರಗುಂಡ ಹಾಗೂ ಮಂಡೆಕೊಲು ಗ್ರಾಮ ಪಂಚಾಯತ್ ಸದಸ್ಯ ಬಾಲಚಂದ್ರ ದೇವರಗುಂಡ ಮತ್ತು ಸಂಘದ ಪ್ರಬಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಹಾಗೂ ಮೃತರ ಮಕ್ಕಳಾದ ಹರಿಪ್ರಸಾದ್ ಮತ್ತು ಶಿವಪ್ರಸಾದ್ ಹಾಗೂ ಸಂಘದ ಹಿರಿಯ ಸಿಬಂದಿ ಪದ್ಮನಾಭ ಉಪಸ್ಥಿತರಿದ್ದರು.

ಇತ್ತೀಚೆಗೆ ನಿಧನರಾದ ಸಂಘದ ಸದಸ್ಯೆ ಶ್ರೀಮತಿ ಕುಸುಮಾವತಿ ಜಾಲಬಾಗಿಲು ಮನೆ ಇವರ ಮನೆಯವರಿಗೆಗೂ ಸಾಂತ್ವನ ನಿಧಿಯನ್ನು ನೀಡಲಾಯಿತು ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಈಶ್ವರಚಂದ್ರ ಕೆ ಆರ್ ಹಾಗೂ ಪ್ರಬಾರ ಮುಖ್ಯಕಾರ್ಯನಿರ್ವಹಣಾದಿಕಕಾರಿ ಮತ್ತು ಸಿಬಂದಿಗಳು ಸಹಕರಿಸಿದರು