ಸುಬ್ರಹ್ಮಣ್ಯದ ಎಸ್‌ಎಸ್‌ಪಿಯು ಕಾಲೇಜಿನಲ್ಲಿ ತಾಲೂಕು ಮಟ್ಟದ ಕಾಲೇಜುಗಳ ವಿವಿಧ ಸ್ಪರ್ಧೆ

0

ಸುಬ್ರಹ್ಮಣ್ಯದ ಎಸ್‌ಎಸ್‌ಪಿಯು ಕಾಲೇಜಿನಲ್ಲಿ ನ.23 ತಾಲೂಕು ಮಟ್ಟದ ಕಾಲೇಜುಗಳ ವಿವಿಧ ಸ್ಪರ್ಧೆಗಳು ನಡೆಯಿತು.

ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್ ಕಾರ್ಯಕ್ರಮ ಉದ್ಘಾಟಿಸಿದರು.
ಕಡಬ ತಾಲೂಕು ಸ್ವೀಪ್‌ನ ನೋಡೆಲ್ ಅಧಿಕಾರಿ ಮತ್ತು ಕಾಲೇಜಿನ ಉಪನ್ಯಾಸಕಿ ಜಯಶ್ರೀ.ವಿ.ದಂಬೆಕೋಡಿ ವೇದಿಕೆಯಲ್ಲಿದ್ದರು.
ವಿದ್ಯಾರ್ಥಿನಿ ಸಂಖ್ಯಾ ಸ್ವಾಗತಿಸಿದರು. ಪ್ರಜ್ಞಶ್ರೀ ವಂದಿಸಿದರು, ವಿದ್ಯಾರ್ಥಿ ಗಗನ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ, ಕನ್ನಡ ಪ್ರಬಂಧ ಮತ್ತು ಮತದಾನ ಜಾಗೃತಿಯ ಬಿತ್ತಿಪತ್ರ ರಚನಾ ಸ್ಪರ್ಧೆ ನಡೆಯಿತು.ಕಡಬ ತಾಲೂಕಿನ ಸುಬ್ರಹ್ಮಣ್ಯ, ರಾಮಕುಂಜ, ನೂಜಿಬಾಳ್ತಿಲ, ಸವಣೂರು, ಪಂಜ, ಕಡಬ ಪರಿಸರದ ಕಾಲೇಜುಗಳ ವಿದ್ಯಾರ್ಥಿಗಳು ಸಭೆಯಲ್ಲಿ ಭಾಗವಹಿಸಿದ್ದರು.