ಗುತ್ತಿಗಾರಿನ ವಳಲಂಬೆಯಲ್ಲಿ ನ.27 ರ ಬೆಳಗ್ಗೆ ಮಹಿಳೆಯೊಬ್ಬರು ಕೆ.ಎಸ್.ಆರ್.ಟಿ.ಸಿ. ಬಸ್ ನಿಂದ ಇಳಿಯುವಾಗ ಬಿದ್ದು ಗಾಯಗೊಂಡ ಘಟನೆ ವರದಿಯಾಗಿದೆ.
ಸುಳ್ಯದಿಂದ ಬಂದಿರುವ ಕುಂಬಾರಕೇರಿಯ ಮಹಿಳೆಯೊಬ್ಬರು ವಳಲಂಬೆಯಲ್ಲಿ ಬಸ್ ನಿಲ್ಲುವ ಸಂದರ್ಭ ಬಸ್ ನಿಂದ ಇಳಿಯುತಿದ್ದಾಗ ನಿಯಂತ್ರಣ ತಪ್ಪಿ ಮುಗ್ಗರಿಸಿ ಬಿದ್ದರೆನ್ನಲಾಗಿದೆ. ಬಿದ್ದ ರಬಸಕ್ಕೆ ಮುಖದ ಒಂದು ಭಾಗಕ್ಕೆ ಗಾಯವಾಗಿದ್ದು ಅಲ್ಲಿ ಉಪಚರಿಸಲಾಗಿ ಅವರನ್ನು ಕೆ.ಎಸ್.ಆರ್.ಟಿ.ಸಿ ಯ ಕಂಡಕ್ಟರ್ ಅದೇ ಬಸ್ಸಿನಲ್ಲಿ ಕರೆದೊಯ್ದು ಅವರಿಗೆ ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿರುವುದಾಗಿ ತಿಳಿದು ಬಂದಿದೆ.