ವೈಭವದಿಂದ ನಡೆದ ನಡುಗಲ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ

0

ತುಂಬಿದ ಸಭಾಂಗಣ, ಮೆರುಗು ಹೆಚ್ಚಿಸಿದ ಸಾಂಸ್ಕೃತಿಕ ಕಾರ್ಯಕ್ರಮ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುಗಲ್ಲು ಮತ್ತು ಹಿರಿಯ ವಿದ್ಯಾರ್ಥಿ ಸಂಘ ನಡುಗಲ್ಲು ಹಾಗೂ ಊರ ವಿದ್ಯಾಭಿಮಾನಿಗಳ ಸಹಭಾಗಿತ್ವದಲ್ಲಿ ನ.29 ರಂದುನಡುಗಲ್ಲು ಸ.ಹಿ.ಪ್ರಾ.ಶಾಲೆಯಲ್ಲಿ ವಾರ್ಷಿಕೋತ್ಸವ ಸಮಾರಂಭ ನಡೆಯಿತು. ವಾರ್ಷಿಕೋತ್ಸವದ ಸಭಾಂಗಣ ಪೂರ್ತಿ ಪ್ರೇಕ್ಷಕರಿಂದ ತುಂಬಿ ಮೆರುಗು ಹೆಚ್ಚಿಸಿತು. ಸಾಂಸ್ಕೃತಿಕ ಕಾರ್ಯಕ್ರಮವು ವೈವಿಧ್ಯತೆಯಿಂದ ಕೂಡಿತ್ತು.ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ವಹಿಸಿ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಗುತ್ತಿಗಾರು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಸುಮಿತ್ರ ಮೂಕಮಲೆ, ಲೀಡರ್ ಶಿಪ್ ಎಕ್ಸಲೆನ್ಸ್ ಸೊಲ್ಯೂಶನ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಇದರ ಸಿ.ಇ.ಒ ಧೀರೇನ್ ಪರಮಲೆ, ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಗುತ್ತಿಗಾರು ಗ್ರಾ.ಪಂ ನ ಉಪಾಧ್ಯಕ್ಷೆ ಭಾರತಿ ಸಾಲ್ತಾಡಿ, ಸುಳ್ಯ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಧರ ಗೌಡ, ಗುತ್ತಿಗಾರು ಗ್ರಾ.ಪಂ ಸದಸ್ಯರಾದ ವಿಜಯಕುಮಾ‌ರ್ ಚಾರ್ಮತ, ಹರೀಶ್ ಕೊಯಿಲ, ಪ್ರಮೀಳ ಎರ್ದಡ್ಕ, ಲೀಲಾವತಿ ಅಂಜೇರಿ, ಗುತ್ತಿಗಾರು ಗ್ರಾ.ಪಂ ಪಿಡಿಒ ಧನಪತಿ, ಶಾಲಾ ಮುಖ್ಯೋಪಾಧ್ಯಾಯರಾದ ಚಂದ್ರಶೇಖರ ಪಾರೆಪ್ಪಾಡಿ, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಉಮೇಶ್ವರಿ ನೆಲ್ಲುಪುಣಿ, ಶಾಲಾ ನಾಯಕ ಮಾl ಕೌಶಿಕ್ ಉಪಸ್ಥಿತರಿದ್ದರು. ಸಭೆಯಲ್ಲಿ 18 ವರ್ಷಗಳ ಕಾಲ ನಡುಗಲ್ಲು ಶಾಲೆಯಲ್ಲಿ ಶಿಕ್ಷಕ ವೃತ್ತಿ ಜೀವನ ನಡೆಸಿ ಗುತ್ತಿಗಾರು ಶಾಲೆಗೆ ವರ್ಗಾವಣೆಗೊಂಡು ಕುಶಾಲಪ್ಪ ಮತ್ತು ದಂಪತಿಗಳನ್ನು. ಸತತ 11 ವರ್ಷಗಳ ಕಾಲ ಎಸ್ ಡಿ ಎಂ ಸಿ ಯಲ್ಲಿದ್ದಿ ಅಭೂತಪೂರ್ವ ಅಭಿವೃದ್ಧಿ ಕೆಲಸ ಮಾಡಿದ ಮೋಹನ ನಾಯ್ಕ ಚಾರ್ಮತ ಮತ್ತು ಯಶೋದಾ ದಂಪತಿಗಳನ್ನು ಸನ್ಮಾನಿಸಲಾಯಿತು. ಎಸ್.ಡಿ.ಎಂ.ಸಿ ಅಧ್ಯಕ್ಷೆ ಉಮೇಶ್ವರಿ ನೆಲ್ಲಿಪುಣಿ ಸ್ವಾಗತಿಸಿಸಿದರು. ಮುಖ್ಯೋಪಾಧ್ಯಾಯ ಚಂದ್ರಶೇಖರ್ ವರದಿ ವಾಚಿಸಿದರು. ಬಹುಮಾನಿತರ ಪಟ್ಟಿಯನ್ನು ಶಿಕ್ಷಕಿಯರಾದ ಕುಮಾರಿ ಸುಧಾರಾಣಿ, ಶ್ರೀಮತಿ ಸವಿತಾ,, ಶ್ರೀಮತಿ ಮೋಕ್ಷ ವಾಚಿಸಿದರು. ಹಿರಿಯ ವಿದ್ಯಾರ್ಥಿ ಗಳ/ ಸಾರ್ವಜನಿಕರ, ಪಟ್ಟಿಯನ್ನು ಕುಮಾರಿ ದಿಶಾ ಹಾಗೂ ಹರಿಶ್ಚಂದ್ರ ಕುಳ್ಳಂಪಾಡಿ ವಾಚಿಸಿದರು. ಹರೀಶ್ ಕೊಯಿಲ ವಂದಿಸಿದರು. ಶ್ರೀಮತಿ ವನಜಾಕ್ಷಿ ಸಹ ಶಿಕ್ಷಕಿ ಕಾರ್ಯಕ್ರಮ ನಿರೂಪಿಸಿದರು.ಆರಂಭದಲ್ಲಿ ಶಾಲಾ ಆವರಣ ಗೋಡೆಯನ್ನು ಶಾಸಕಿ ಭಾಗೀರಥಿ ಉದ್ಘಾಟಿಸಿದರು. ಬಳಿಕ ಗುತ್ತಿಗಾರು ಗ್ರಾ.ಪಂ ಅಧ್ಯಕ್ಷೆ ಸುಮಿತ್ರಾ ಮೂಕಮಲೆ ಅಕ್ಷರ ದಾಸೋಹ ಕೊಠಡಿ ಉದ್ಘಾಟಿಸಿದರು.ಸಭಾ ಕಾರ್ಯಕ್ರಮ ಬಳಿಕಬಿಳಿಕ ಅಂಗನವಾಡಿ ಪುಟಾಣಿಗಳಿಂದ, ಶಾಲಾ ಮಕ್ಕಳಿಂದ, ಹಿರಿಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಯಕ್ಷಗಾನ ನಡೆಯಿತುನಡೆಯಿತು