ಸುಳ್ಯ ಲಯನ್ಸ್ ಕ್ಲಬ್ ಸದಸ್ಯರಿಗೆ ಅಬುದಾಬಿ ಮತ್ತು ದುಬೈ ವಿದೇಶ ಪ್ರವಾಸ

0

ಸುಳ್ಯ ಲಯನ್ಸ್ ಕ್ಲಬ್ ವತಿಯಿಂದ ಸುಮಾರು 41ಮಂದಿ ಸದಸ್ಯರನ್ನು ಒಳಗೊಂಡಂತೆ ಇಂದು ವಿದೇಶ ಪ್ರವಾಸವನ್ನು ಕೈಗೊಳ್ಳಲಾಯಿತು.
ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ವೀರಪ್ಪ ಗೌಡ ಹಾಗೂ ಲಯನ್ ಜಯರಾಮ ದೇರಪ್ಪಜ್ಜನಮನೆ ರವರ ನೇತೃತ್ವದಲ್ಲಿ ಅಬುದಾಬಿ ಮತ್ತು ದುಬೈ ಪ್ರವಾಸ ಹಮ್ಮಿಕೊಳ್ಳಲಾಯಿತು.

ಇಂದು ಬೆಳಗ್ಗೆ ಸುಳ್ಯದಿಂದ ಪ್ರವಾಸ ತಂಡವು ಲಯನ್ಸ್ ಕ್ಲಬ್ ಬಳಿಯಿಂದ ಪ್ರಯಾಣ ಹೊರಟಿತು. ಬೆಳ್ಳಾರೆ ಮತ್ತು ಸುಬ್ರಹ್ಮಣ್ಯ ಕ್ಲಬ್ ಸದಸ್ಯರು ಭಾಗವಹಿಸಿರುತ್ತಾರೆ.
ಸುಮಾರು 5 ದಿನಗಳ ಕಾಲ ವಿದೇಶ ಪ್ರವಾಸದ ಯಾತ್ರೆಯು ನಡೆಯಲಿರುವುದು.