ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕಥೆ ಹೇಳುವ ಸ್ಪರ್ಧೆಯಲ್ಲಿ ಮುರುಳ್ಯ ಶಾಂತಿನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ 5ನೇ ತರಗತಿ ವಿದ್ಯಾರ್ಥಿ ತನ್ಮಯ್ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಇವರು ಮೂಲತಃ ಮುರುಡೇಶ್ವರದವರಾಗಿದ್ದು, ಗೋಳ್ತಿಲದಲ್ಲಿ ವಾಸವಿರುವ ಕಾಯರ್ತಡ್ಕ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಶ್ರೀಮತಿ ರಶ್ಮಿ ಮತ್ತು ಕುಶ ಶೆಟ್ಟಿಯವರ ಪುತ್ರ.