ಡಿ.09: ಸುಳ್ಯ ಅಯ್ಯಪ್ಪ ಸೇವಾ ಸಮಿತಿ ವತಿಯಿಂದ 29 ನೇ ವರ್ಷದ ಅಯ್ಯಪ್ಪ ಸ್ವಾಮಿಯ ದೀಪೋತ್ಸವ

0

ಸುಳ್ಯ ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಆಶ್ರಯದಲ್ಲಿ 29 ನೇ ವರ್ಷದ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಯ ದೀಪೋತ್ಸವವು ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಜಟ್ಟಿಪಳ್ಳ ಎಸ್.ಕೆ.ಸತೀಶ್ ಗುರುಸ್ವಾಮಿ ಯವರ ನೇತೃತ್ವದಲ್ಲಿ ನಡೆಯಲಿರುವುದು. ಪ್ರಾತ:ಕಾಲ ಅರ್ಚಕರ ನೇತೃತ್ವದಲ್ಲಿ ಗಣಪತಿ ಹವನವಾಗಿ ಉಷಾ ಪೂಜೆಯು ನಡೆದು ಮಧ್ಯಾಹ್ನ ಮಹಾಪೂಜೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ಹಳೆಗೇಟು ಬಳಿಯಿಂದ ಅಯ್ಯಪ್ಪ ಭಕ್ತಾದಿಗಳ ಪಾಲ್ ಕೊಂಬು ಮೆರವಣಿಗೆಯು ಸುಳ್ಯ ಮುಖ್ಯ ರಸ್ತೆಯ ಮೂಲಕ ಗಾಂಧಿನಗರದವರೆಗೆ ಸಾಗಿ ಹಿಂತಿರುಗಿ ರಥಬೀದಿಯ ಮೂಲಕ ಚೆಂಡೆ ವಾದ್ಯ ಘೋಷಗಳೊಂದಿಗೆ ಬಾಲಕಿಯರ ದೀಪಾರಾಧನೆಯ ಬೆಳಕಿನೊಂದಿಗೆ ಸಿಡಿ ಮದ್ದಿನ ಪ್ರದರ್ಶನದೊಂದಿಗೆ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಪ್ರತಿಷ್ಠಾಪಿಸಿದ ಅಯ್ಯಪ್ಪ ಸ್ವಾಮಿಯ ಸನ್ನಿಧಾನದವರೆಗೆ ಸಾಗಿ ಬರಲಿದೆ. ರಾತ್ರಿ ಗಂಟೆ 7.30 ರಿಂದ ಗಾಯಕ ಶಿವಪ್ರಸಾದ್ ಆಲೆಟ್ಟಿ ನಿರ್ದೇಶನದ ಶಿವ ಸ್ವರ ಮೆಲೋಡೀಸ್ ರವರಿಂದ ಭಕ್ತಿಗಾನ ಸುಧಾ ಕಾರ್ಯಕ್ರಮವು ನಡೆಯಲಿದೆ. ರಾತ್ರಿ ಗಂಟೆ 9.30 ರಿಂದ ಶ್ರೀ ಬೆಂಕಿನಾಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಕಳವಾರು ಬಾಳ ಮಂಗಳೂರು ಇವರಿಂದ ಧರ್ಮದೈವ ಧೂಮಾವತಿ ತುಳು ಯಕ್ಷಗಾನ ಬಯಲಾಟವು ನಡೆಯಲಿರುವುದು. ಡಿ.10 ರಂದು ಪ್ರಾತ:ಕಾಲ ಗಂಟೆ 4.30 ಕ್ಕೆ ಅಯ್ಯಪ್ಪ ವೃತಧಾರಿಗಳಿಂದ ಅಗ್ನಿ ಸೇವೆಯು ನಡೆಯಲಿರುವುದು ಎಂದು ಸಮಿತಿಯ ಅಧ್ಯಕ್ಷ ಜನಾರ್ದನ ದೋಳ ರವರು ತಿಳಿಸಿದರು.