ಪುತ್ತೂರು ಸಹಕಾರಿ ಕ್ರೀಡಾಕೂಟದಲ್ಲಿ ಸುಳ್ಯ ತಾಲೂಕಿನಿಂದ ಬಾಗವಹಿಸಿದ ನವೋದಯ ಸಂಘಗಳಿಗೆ ಬಹುಮಾನ

0

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಮತ್ತು ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ರಿ ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸಹಕಾರಿ ಸಂಘಗಳು ಹಾಗೂ ನವೋದಯ ಸಂಘಗಳ ಆಶ್ರಯದಲ್ಲಿ ನ.30ರಂದು ಸರಕಾರಿ ಪದವಿ ಪೂರ್ವ ಕಾಲೇಜು ಕೊಂಬೆಟ್ಟು ಪುತ್ತೂರಿನಲ್ಲಿ ನಡೆದ ಸಹಕಾರಿ ಕ್ರೀಡಾಕೂಟದಲ್ಲಿ ಸುಳ್ಯ ತಾಲೂಕಿನ‌ ನವೋದಯ ಸಂಘದ ಸದಸ್ಯರು ಭಾಗವಹಿಸಿ ವಿವಿಧ ಬಹುಮಾನ ಪಡೆದುಕೊಂಡರು.

ಮಹಿಳೆಯರ ಹಗ್ಗಜಗ್ಗಾಟದಲ್ಲಿ ನವೋದಯ ಪ್ರೇರಕಿಯರ ಸುಳ್ಯ ತಾಲೂಕು ತಂಡ ಪ್ರಥಮ, ಪುರುಷರ ಹಗ್ಗಜಗ್ಗಾಟದಲ್ಲಿ ಸುಳ್ಯ ತಾಲೂಕು ನವೋದಯ ಸ್ವ ಸಹಾಯ ಸಂಘದ ಸದಸ್ಯರ ತಂಡ ದ್ವಿತೀಯ, ಮಹಿಳೆಯರ ಹಗ್ಗಜಗ್ಗಾಟದಲ್ಲಿ ಸುಳ್ಯ ತಾಲೂಕು ನವೋದಯ ಸ್ವ ಸಹಾಯ ಸಂಘದ ಸದಸ್ಯರ ತಂಡ ದ್ವಿತೀಯ, ಗುಂಡೆಸೆತದಲ್ಲಿ
ನವೋದಯ ಪ್ರೇರಕಿ ಸವಿತಾ ಏನೆಕಲ್ಲು ಪ್ರಥಮ, ನೆಲ್ಲೂರು ಕೆಮ್ರಾಜೆ ಯ ಪ್ರೇರಕಿ ದೇವಕಿ ದ್ವಿತೀಯ, ಮತ್ತು ಮರ್ಕಂಜದ ಪ್ರೇರಕಿ ಅನಿತಾ ತೃತೀಯ,
ನವೋದಯ ಪ್ರೇರಕರ 100 ಮೀಟರ್ ಓಟ ದಲ್ಲಿ ಪ್ರೇರಕ ದಾಮೋದರ ಗುತ್ತಿಗಾರು ದ್ವಿತೀಯ ಮತ್ತು ಹೇಮಂತ್ ಪಂಜ ತೃತೀಯ, ಸುಳ್ಯ ವಲಯದ ಸೌಪರ್ಣಿಕಾ ನವೋದಯ ಗುಂಪಿನ ಸದಸ್ಯರಾದ ಯಶೋಧ ಸುಳ್ಯ ಮಹಿಳೆಯರ 100 ಮೀಟರ್ ಓಟದಲ್ಲಿ ಪ್ರಥಮ, ಸಂಪಾಜೆ ವಲಯದ ಮಂಜುಶ್ರಿ ನವೋದಯ ಗುಂಪಿನ ಸದಸ್ಯರಾದ ಮೋಹನ್ ರವರು ಗುಂಡೆಸೆತ ದಲ್ಲಿ ಪ್ರಥಮ, ಹರಿಹರ ಕೊಲ್ಲಮೊಗ್ರು ವಲಯದ ಶ್ರೀ ತುಳಸಿ ನವೋದ ಗುಂಪಿನ ಸದಸ್ಯರಾದ
ಸಂದೀಪ್ ರವರು ಗುಂಡೆಸೆತದಲ್ಲಿ ದ್ವಿತೀಯ, ಅರಂತೋಡು ವಲಯದ ನವಜ್ಯೋತಿ ನವೋದಯ ಗುಂಪಿನ ಸದಸ್ಯರಾದ ರಮ್ಯರವರು ಗುಂಡೆಸೆತದಲ್ಲಿ ಪ್ರಥಮ, ಗುತ್ತಿಗಾರು ವಲಯದ ನಾಗಶ್ರಿ ನವೋದ ಗುಂಪಿನ ಸದಸ್ಯರಾದ ಮಮತರವರು 100 ಮೀಟರ್ ಓಟದಲ್ಲಿ ದ್ವಿತೀಯ, ಕಳಂಜ ಬಾಳಿಲ ವಲಯದ ಪಾರಿಜಾತ ನವೋದಯ ಗುಂಪಿನ ಸದಸ್ಯರಾದ ಕಮಲವರು 100 ಮೀಟರ್ ಓಟದಲ್ಲಿ ತೃತೀಯ ಮತ್ತು ಪಥಸಂಚಲನದಲ್ಲಿ ಸುಳ್ಯ ತಾಲೂಕು ದ್ವಿತೀಯ ಸ್ಥಾ‌ನ ಪಡೆದುಕೊಂಡಿದ್ದಾರೆ.