ಸಮಾವೇಷೋದ್ಘೋಷ, ಹಿರಿಯ ವಿಪ್ರ ಸಾಧಕರಿಗೆ ಗೌರವಾರ್ಪಣೆ
ಸುಳ್ಯ ತಾಲೂಕು ಬ್ರಾಹ್ಮಣರ ಸಂಘದ ವತಿಯಿಂದ ವಿಪ್ರ ಸಮಾವೇಶ 2023 ಡಿ. 9 ಮತ್ತು 10 ರಂದು ಕಲ್ಮಡ್ಕದ ಪಂಚವಟಿ ಸಭಾಭವನ ಶ್ರೀರಾಮ ಭಜನಾ ಮಂದಿರ ರಾಮನಗರದಲ್ಲಿ ನಡೆಯಲಿದ್ದು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಸಂಘದ ವತಿಯಿಂದ ಡಿ.2 ರಂದು ಪತ್ರಿಕಾಗೋಷ್ಠಿಯನ್ನು ಕರೆಯಲಾಯಿತು.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ
ತಾಲೂಕು ಬ್ರಾಹ್ಮಣ ಸಂಘದ ಕಾರ್ಯಕಾರಿ ಸಮಿತಿ ಅಧ್ಯಕ್ಷ
ಡಾ. ಬಾಲಸುಬ್ರಹ್ಮಣ್ಯ ಪಾಲೆಪ್ಪಾಡಿ ಯವರು
ಬ್ರಾಹ್ಮಣ ಸಮಾಜದಲ್ಲಿ ರುವ ವಿವಿಧ ವರ್ಗದವರನ್ನು ಎಲ್ಲರನ್ನೂ ಒಂದು ಕಡೆಯಲ್ಲಿ ಒಟ್ಟು ಸೇರಿಸಿ ಜತೆಯಾಗಿ ಸಂಭ್ರಮಿಸುವ ಸಲುವಾಗಿ ವಿಪ್ರ ಸಮಾವೇಶ ನಡೆಸಲಾಗುತ್ತಿದೆ. ಸಮಾಜ ಬಾಂಧವರಿಗೆ ಸಮಾವೇಶದ ಮೂಲಕ ಉಪಯುಕ್ತ ಮಾಹಿತಿ ಮಾರ್ಗದರ್ಶನ ನೀಡಲಾಗುವುದು. ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಸಭಾದ ಅಧ್ಯಕ್ಷ ಅಶೋಕ್ ಹಾರ್ನಳ್ಳಿ ಹಾಗೂ ಉಪಾಧ್ಯಕ್ಷ ನ್ಯಾಯವಾದಿ ಮಹೇಶ್ ಕಜೆಯವರು ಭಾಗವಹಿಸಲಿದ್ದಾರೆ.
ಸಮಾವೇಶದಲ್ಲಿ ಸಮಾಜದ ಸದಸ್ಯರಿಗೆ ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ಅವಶ್ಯಕ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗುವುದು.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬರಹಗಳ ಮೂಲಕ ಬ್ರಾಹ್ಮಣ ಸಮಾಜವನ್ನು ಗುರಿಯಾಗಿರಿಸಿಕೊಂಡು ದಲಿತ ಸಂಘದವರನ್ನು ಎತ್ತಿ ಕಟ್ಟುವ ಕೆಲಸಗಳು ನಡೆಯುತ್ತಿದೆ.
ಬ್ರಾಹ್ಮಣ ಸಮಾಜದ ಬಾಂಧವರು ಪ್ರತಿದಿನ ದೇವರನ್ನು ಪೂಜಿಸುವ ಸಂದರ್ಭದಲ್ಲಿ ಲೋಕಕಲ್ಯಾಣಕ್ಕಾಗಿ ಹಾಗೂ ಸರ್ವೇ ಜನಾ ಸುಖಿನೋ ಭವಂತು ಎಂಬ ಧ್ಯೇಯವನ್ನು ಇರಿಸಿಕೊಂಡು ಪ್ರಾರ್ಥಿಸುತ್ತಾರೆ.
ಅನ್ಯ ಸಮುದಾಯದ ಜನಾಂಗವನ್ನು ದೂಷಿಸುವ ಅಥವಾ ದ್ವೇಷಿಸುವ ಕಾರ್ಯಕ್ಕೆ ಎಂದು ಮುಂದಾಗಲಿಲ್ಲ ಎಂದು ಅವರು ಹೇಳಿದರು.
ಡಿ. 9 ರಂದು ಸಮಾವೇಶವನ್ನು ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ಉದ್ಘಾಟಿಸಲಿದ್ದಾರೆ.
ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ.
ಸಂಘದ ಗೌರವಾಧ್ಯಕ್ಷ ಬಾಲಕೃಷ್ಣ ಭಟ್ ಕೊಡಂಕೇರಿ ಅಧ್ಯಕ್ಷತೆಯಲ್ಲಿ ಸಮಾವೇಷೋದ್ಘೋಷ ನಡೆಯಲಿದೆ. ಅಖಿಲ ಕರ್ನಾಟಕ ಬ್ರಾಹ್ಮಣ ಸಭಾದ ಅಧ್ಯಕ್ಷ ಅಶೋಕ್ ಹಾರ್ನಳ್ಳಿ ಪ್ರಧಾನ ಭಾಷಣ ಮಾಡಲಿದ್ದಾರೆ.
ಸಮಾವೇಶದಲ್ಲಿ ವೈದಿಕ ಕಾರ್ಯಕ್ರಮ, ವೇದ ಪಠಣ, ಭಜನೆ, ದೇವರನಾಮ ಹಾಗೂ ಭಾಷಣಗಳು- ಅವಿಭಜಿತ ದಕ್ಷಣ ಕನ್ನಡ ಜಿಲ್ಲೆಯಲ್ಲಿ ಬ್ರಾಹ್ಮಣರ ವಲಸೆ ಕುರಿತು ಡಾ. ಎಂ.ಪ್ರಭಾಕರ ಜೋಷಿ ಯವರಿಂದ ಭಾಷಣ,
ವೇ. ಮೂ. ಕರುವಜೆ ಕೇಶವ ಜೋಯಿಸ ರಿಂದ
ವೇದ ಉವಾಚ, ದೀಪಾ ಪಡ್ಕೆಯವರಿಂದ ಸಾಹಿತ್ಯದಲ್ಲಿ ಸುಳ್ಯ ಬ್ರಾಹ್ಮಣರ ಕೊಡುಗೆ,
ಸಾಯಿ ನಾರಾಯಣ ಕಲ್ಮಡ್ಕ ರವರಿಂದ ಶಾಸ್ತ್ರೀಯ ಸಂಗೀತ, ಡಾ. ಕಿಶನ್ ರಾವ್ ಬಾಳಿಲ ವೈದ್ಯೋ ನಾರಾಯಣೋ ಹರಿ:, ಡಾ| ವೀಣಾ ಫಾಲಚಂದ್ರ ಸುಳ್ಯ ಇವರಿಂದ ಬ್ರಾಹ್ಮಣರಲ್ಲಿ ಆಚರಣೆ, ಪ್ರಕಾಶ ಮೂಡಿತ್ತಾಯ ರಿಂದ ಶಿಕ್ಷಕನಾಗಿ ಬ್ರಾಹ್ಮಣ,
ಗೀತಾ ಸರಳಾಯ ರಿಂದ ಶಾಸ್ತ್ರೀಯ ನೃತ್ಯ, ಸಮನ್ವಯ ಗೋಷ್ಠಿಯಲ್ಲಿ ಸಮಾಜದಲ್ಲಿ ಯುವ ಬ್ರಾಹ್ಮಣರು ಎಂಬ ವಿಷಯಗಳ ಕುರಿತು ಕೃಷ್ಣ ರಾವ್, ವಿ.ಪಿ ಹೊಳ್ಳ, ಸುಧಾಕರ ನೆಟ್ಟಾರು ಇವರಿಂದ ಭಾಷಣ ನಡೆಯಲಿರುವುದು.
ಸಮಾವೇಶದಲ್ಲಿ ಸಮಾಜ ಬಾಂಧವರಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಾದ್ಯ ಸಂಗೀತ ಗೋಷ್ಠಿ, ನೃತ್ಯಾರ್ಪಣಂ, ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮ
ಹಾಗೂ ಯಕ್ಷಗಾನ ಬಯಲಾಟವು ನಡೆಯಲಿದೆ. ತಾಲೂಕಿನ ಹಿರಿಯ ವಿಪ್ರ ಸಾಧಕರಿಗೆ ಗೌರವಾರ್ಪಣೆಯು ನಡೆಯಲಿರುವುದು ಎಂದು ಸಂಘದ ಕಾರ್ಯಕಾರಿ ಸಮಿತಿ ಉಪಾಧ್ಯಕ್ಷ ಶ್ರೀಕೃಷ್ಣ ಸೋಮಯಾಗಿ ಎಂ. ಎನ್ ವಿವರ ನೀಡಿದರು.
1943 ರಲ್ಲಿ ಉಬರಡ್ಕ
ದಿ. ತಿಮ್ಮಪ್ಪಯ್ಯ ಭಟ್ ಸ್ಥಾಪಕಾಧ್ಯಕ್ಷರಾಗಿ, ಕಾರ್ಯದರ್ಶಿ ದಿ.ಚಣಿಲ ರಾಮಚಂದ್ರ ಭಟ್ ರವರ ಸಾರಥ್ಯದಲ್ಲಿ ತಾಲೂಕು ದ್ರಾವಿಡ ಬ್ರಾಹ್ಮಣ ಸಂಘವನ್ನು ರಚಿಸಲಾಯಿತು.
1973 ರಲ್ಲಿ ತಾಲೂಕು ಬ್ರಾಹ್ಮಣ ಸಂಘ ಸ್ಥಾಪಿಸಿ ಪ್ರಥಮ ಸಮ್ಮೇಳನ ನಡೆಸಲಾಯಿತು. 1994 ರಲ್ಲಿ ದ್ವಿತೀಯ ಸಮ್ಮೇಳನ ನಡೆಸಲಾಗಿತ್ತು.
ಇದೀಗ ತೃತೀಯ ವಿಪ್ರ ಸಮಾವೇಶವನ್ನು ಕಲ್ಮಡ್ಕದಲ್ಲಿ ಆಯೋಜಿಸಲಾಗಿದೆ. ಸಂಘದ ವತಿಯಿಂದ ಸ್ವಂತ ಕಟ್ಟಡದಲ್ಲಿ ವಿದ್ಯಾರ್ಥಿ ಭವನ ನಿರ್ಮಿಸಿ ವಿದ್ಯಾರ್ಥಿ ನಿಲಯವನ್ನು ನಡೆಸಿಕೊಂಡು ಬರಲಾಗುತ್ತಿದೆ. ಮುಂದಿನ ದಿನಗಳಲ್ಲಿ ವರ್ಷಂಪ್ರತಿ ಸಮಾವೇಶವನ್ನು ತಾಲೂಕಿನ ಬೇರೆ ಕೇಂದ್ರಗಳಲ್ಲಿ ನಡೆಸಲಾಗುವುದು ಎಂದು ಪ್ರಧಾನ ಕಾರ್ಯದರ್ಶಿ ಕೃಷ್ಣ ರಾವ್ ನಾವೂರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜತೆ ಕಾರ್ಯದರ್ಶಿ ಸತೀಶ್ ರಾವ್ ಐ.ಕೆ ದಾಸರಬೈಲು, ಸುಬ್ರಹ್ಮಣ್ಯ ಹೊಳ್ಳ ಎಂ.ಬೈತಡ್ಕ, ಸದಸ್ಯರಾದ ಅರುಣ್ ಕುಮಾರ್ ಎನ್ ಸುಳ್ಯ, ಈಶ್ವರ ಕುಮಾರ್ ಭಟ್ ಉಬರಡ್ಕ ಉಪಸ್ಥಿತರಿದ್ದರು.