ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇದರ ವಿದ್ಯಾರ್ಥಿ ಮಂಡಲದ ರಚನೆ ಮತ್ತು ಪದಪ್ರಧಾನ ಸಮಾರಂಭ ಸಂಸ್ಥೆಯ ಧನ್ವಂತರಿ ಆಡಿಟೋರಿಯಂನಲ್ಲಿ ಇತ್ತೀಚೆಗೆ ನಡೆಯಿತು.
ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನ ಅಧ್ಯಕ್ಷ ಡಾಕ್ಟರ್ ಕೆ.ವಿ ಚಿದಾನಂದ ಅಧ್ಯಕ್ಷ ಸ್ಥಾನವನ್ನು ವಹಿಸಿ 1996 ರಿಂದ ಕಾಲೇಜು ಪ್ರಾರಂಭಗೊಂಡು ಇಲ್ಲಿಯ ತನಕ ನಡೆದು ಬಂದ ದಾರಿ ಮತ್ತು ಅದಕ್ಕಾಗಿ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಪಟ್ಟ ಪರಿಶ್ರಮದ ಬಗ್ಗೆ ತಿಳಿಸಿದರು. ಕಾರ್ಯಕ್ರಮ ವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಆರ್.ಎಫ್. ಓ. ಮಂಜುನಾಥ್ ವಿದ್ಯಾರ್ಥಿಗಳ ಒಕ್ಕೂಟ ಮತ್ತು ವಿದ್ಯಾರ್ಥಿಗಳ ನಡುವಿನ ಒಗ್ಗಟ್ಟು ಮತ್ತು ಅದರ ಮಹತ್ವವನ್ನು ತಿಳಿಸಿದರು. ಅಕಾಡೆಮಿ ಆಫ್ ಲಿಬರಲ್ ಎಜುಕೇಶನಿನ ಕಾರ್ಯದರ್ಶಿ ಡಾ. ಐಶ್ವರ್ಯ ಕೆ.ಸಿ ಮಾತನಾಡಿ ವಯಸ್ಸು ಒಂದು ಮಾನದಂಡ ಮಾತ್ರ, ಪ್ರತಿಯೊಬ್ಬನಲ್ಲಿ ಇರಬೇಕಾದ ಹುಮ್ಮಸ್ಸು ಮತ್ತು ಗುರಿ ತಲುಪಬೇಕಾದಂತ ವ್ಯವಸ್ಥೆಯಲ್ಲಿ ಮುನ್ನುಗ್ಗಿ ಸಾಗಬೇಕು ಮತ್ತು ಗುರಿ ತಲುಪುವ ನಿಟ್ಟಿನಲ್ಲಿ ಯಾವುದೇ ರೀತಿಯಾದ ಚಂಚಲತೆಗೆ ಎಡೆ ಎಡೆಮಾಡಿಕೊಡಬಾರದೆಂದು ಎಂದು ಹೇಳಿ ಶುಭಶ ಹಾರೈಸಿದರು.
ನೂತನ ವಿದ್ಯಾರ್ಥಿ ಮಂಡಲವನ್ನು ವಿಧ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿಗಳಾದ ಡಾ. ಹರ್ಷಿತಾ ಪುರುಷೋತ್ತಮ್ ಸಭೆಗೆ ಪರಿಚಯಿಸಿ ಪ್ರತಿಜ್ಞಾವಿಧಿಯನ್ನು ಭೋಧಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ ಡಿ.ವಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.
ವಿದ್ಯಾರ್ಥಿಗಳಾದ ದಿಲ್ನ, ಶ್ರೀವಿದ್ಯಾ ಹಾಗೂ ವಿಸ್ಮಯ ಪ್ರಾರ್ಥಿಸಿ ನೂತನ ವಿದ್ಯಾರ್ಥಿ ಸಂಘದ ವಿದ್ಯಾರ್ಥಿ ಪ್ರತಿನಿಧಿ ಆರ್ಥಿಕ್ ಕೆ. ಎಸ್ ವಿದ್ಯಾರ್ಥಿ ವೃಂದದ ಹಿತವನ್ನು ಕಾಪಾಡಿಕೊಂಡು ಕಾಲೇಜಿನ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು. ವಿದ್ಯಾರ್ಥಿ ಒಕ್ಕೂಟದ ಕಾರ್ಯದರ್ಶಿ ಶ್ರೀಜ ರೈ ವಂದಿಸಿದರು. ಕೃತಿಕಾ ಹಾಗೂ ಡಾ. ನೇಹಾ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಕಾಲೇಜಿನಲ್ಲಿ ಆಯುರ್ವೇದ ದಿನಾಚರಣೆಯ ಪ್ರಯುಕ್ತ ಕಿರುಚಿತ್ರ ನಿರ್ಮಾಣ ಮಾಡಿ, ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ರಿಸರ್ಚ್ ನಲ್ಲಿ ಅವಕಾಶ ಪಡೆದ ವಿದ್ಯಾರ್ಥಿಗಳ ಹೆಸರನ್ನು ಘೋಷಿಸಿ ಅವರಿಗೆ ಅವರ ಸಾಧನೆಗಾಗಿ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.