ಸ.ಪ.ಪೂ.ಕಾ. ಸುಳ್ಯದ ಸೃಜನಾದಿತ್ಯ ಶೀಲ ಪ್ರತಿಭಾಕಾರಂಜಿಯ ಚರ್ಚಾ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

0

ಮಂಗಳೂರಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯದ 9ನೇ ತರಗತಿ ವಿದ್ಯಾರ್ಥಿ ಸೃಜನಾಧಿತ್ಯಶೀಲ ಇವರು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಇವರಿಗೆ ಉಪಪ್ರಾಂಶುಪಾಲರಾದ ಪ್ರಕಾಶ ಮೂಡಿತ್ತಾಯ ಮಾರ್ಗದರ್ಶನ ನೀಡಿದ್ದರು. ಇವರು ಶಿಕ್ಷಕರಾದ ಡಾ. ಸುಂದರ ಕೇನಾಜೆ ಹಾಗೂ ರಾಜೇಶ್ವರಿ ಇವರ ಪುತ್ರ. ಇದೇ ಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿ ಪೆರಾಜೆಯ ನವೀನ್ ಹಾಗು ಕವಿತಾ ದಂಪತಿಗಳ ಪುತ್ರಿಯಾದ ಹೃತಿಕಾ ಬಿ.ಎನ್. ಛದ್ಮವೇಷ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಇವರಿಗೆ ಕಲಾ ಶಿಕ್ಷಕರಾದ ನಾಗರಾಜ್ ಮಾರ್ಗದರ್ಶನ ನೀಡಿದ್ದರು. ವಿಜೇತರನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ರಾಜೇಶ್ವರಿ ಕಾಡು ತೋಟ, ಎಲ್ಲಾ ಸದಸ್ಯರು ಹಾಗು ಶಿಕ್ಷಕರು ಅಭಿನಂದಿಸಿದ್ದಾರೆ.